ಹೊಸದಿಲ್ಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತಿದೆ. ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿಯವರ ನಡುವೆ ಪೈಪೋಟಿ ನಡೆಯುತಿದೆ. 781 ಮಂದಿ ಒಟ್ಟು ಮತದಾರರಿರುವ ಚುನಾವಣೆಯಲ್ಲಿ ಗೆಲುವಿಗೆ 391 ಮತಗಳ ಅಗತ್ಯವಿದೆ. ಎನ್ಡಿಎ ಬಹುಮತ ಹೊಂದಿರುವ
ಜತೆಗೆ 11 ಸಂಸದರನ್ನು ಹೊಂದಿರುವ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯ ಬೆಂಬಲ ಎನ್ಡಿಎ ನಿರ್ಣಾಯಕ ಗೆಲುವು ತಂದುಕೊಡಲು ಸಹಕಾರಿಯಾಗಲಿದೆ. ಆದರೆ ಬಿಜು ಜನತಾ ದಳ (7) ಹಾಗೂ ಭಾರತ ರಾಷ್ಟ್ರೀಯ ಸಮಿತಿ (4) ಮತದಾನದಿಂದ ಹೊರಗುಳಿಯುವುದಾಗಿ ಘೋಷಿಸಿವೆ.ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಮತದಾನ ಸಂಸತ್ ಭವನದಲ್ಲಿ ನಡೆಯಲಿದ್ದು, ಮತಗಳ ಎಣಿಕೆ ಸಂಜೆ 6ಕ್ಕೆ ಆರಂಭವಾಗಲಿದೆ.
ಒಟ್ಟು 542 ಮಂದಿ ಲೋಕಸಭಾ ಸದಸ್ಯರು ಹಾಗೂ 239 ರಾಜ್ಯಸಭಾ ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಎನ್ಡಿಎ 427 ಹಾಗೂ ವಿರೋಧ ಪಕ್ಷಗಳು 354 ಸದಸ್ಯಬಲ ಹೊಂದಿವೆ. ಆದ್ದರಿಂದ ರಾಧಾಕೃಷ್ಣನ್ ಅವರಿಗೆ ಸಹ ಕವರ್ ಅನುಕೂಲಕರ ವಾತಾವರಣ ಇದೆ.ರಾಧಾಕೃಷ್ಣನ್ (76) ಮೂಲತ ತಮಿಳುನಾಡಿನ ಬಿಜೆಪಿ ಹಿರಿಯ ಮುಖಂಡರಾಗಿದ್ದರೆ, ರೆಡ್ಡಿ (79) ತೆಲಂಗಾಣದವರು ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದವರು.












