ಸುಳ್ಯ: ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಈ ಆರ್ಥಿಕ ವರ್ಷದಲ್ಲಿ ರೂ. 2.28 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷ ಕೆ.ಸಿ.ಸದಾನಂದ ತಿಳಿಸಿದ್ದಾರೆ. ಸೊಸೈಟಿಯ ಮಹಾ ಸಭೆಯ ಬಳಿಕ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘವು
ರೂ 232.66 ಕೋಟಿ ಠೇವಣೆ ಹೊಂದಿದ್ದು, ರೂ 223.05 ಕೋಟಿ ಸಾಲಗಳನ್ನು ಸದಸ್ಯರುಗಳಿಗೆ ವಿತರಿಸಿದೆ. ದುಡಿಯುವ ಬಂಡವಾಳವು ರೂ 246.67 ಕೋಟಿ ಇದ್ದು ಸಂಘವು ಒಟ್ಟು ರೂ. 1,186 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸಿ 2,28,33,971.65 ನಿವ್ವಳ ಲಾಭ ಗಳಿಸಿದೆ. ಸಂಘದಲ್ಲಿ ಪ್ರಸ್ತುತ 21,201 ವಿವಿಧ ವರ್ಗದ ಸದಸ್ಯರಿದ್ದು, ಇವರಿಂದ ರೂ 5.04 ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ.
ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭದ್ರತಾ ಸಾಲ, ಗೃಹಸಾಲ, ವಾಣಿಜ್ಯ ಕಟ್ಟಡ ಸಾಲ, ಜಮೀನು ಖರೀದಿ ಸಾಲ, ಜಮೀನು ಅಡವು ಸಾಲ, ವೇತನ ಸಾಲ, ವ್ಯಾಪಾರ ಸಾಲ ಹಾಗೂ ಜಾಮೀನು ಸಾಲಗಳನ್ನು ನೀಡುತ್ತಿದ್ದು, ಹಾಗೇಯೇ ಇ-ಸ್ಟಾಂಪಿಂಗ್ ವಿತರಣೆ, RTGS/NEFT ಸೌಲಭ್ಯವನ್ನು ನೀಡುತ್ತಿದ್ದೇವೆ. ರಾಜ್ಯದ ವಿವಿಧ ಭಾಗಗಳಲ್ಲಿ 23 ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ.
ಸಂಘದ ಹೆಚ್ಚಿನ ಎಲ್ಲಾ ಶಾಖೆಗಳಲ್ಲಿ ಇ ಸ್ಟಾಂಪಿಂಗ್ ವಿತರಣೆ ಮಾಡುತ್ತಿದ್ದು, ಸುಳ್ಯ ಶಾಖೆಯಲ್ಲಿ ಸೇಫ್ ಡಿಪಾಸಿಟ್ ಲಾಕರ್ ಸೌಲಭ್ಯವನ್ನು ಸದಸ್ಯರಿಗೆ ನೀಡುತ್ತಿದ್ದೇವೆ.

ಗ್ರಾಹಕರ ಅನುಕೂಲಕ್ಕಾಗಿ ಚಿನ್ನಾಭರಣ ಸಾಲದ ಮಿತಿಯನ್ನು 25 ಲಕ್ಷಕ್ಕೆ ಏರಿಸಲಾಗಿದೆ, ರೂ.25 ಲಕ್ಷದ ತನಕ ಚಿನ್ನ ಖರೀದಿ ಸಾಲ ಎಂಬ ಹೊಸ ಸಾಲ ಯೋಜನೆಯನ್ನು ಆರಂಭಿಸಲಾಗಿದೆ. ಸಂಘವು ಈಗಾಗಲೇ ಮಾಡುತ್ತಿರುವ ಆರ್ಥಿಕ ಚಟುವಟಿಕೆಯೊಂದಿಗೆ ವಾಣಿಜ್ಯ, ವ್ಯಾಪಾರ ಇತ್ಯಾದಿ ವ್ಯವಹಾರಗಳನ್ನು ಮಾಡಲು ಬೈಲಾ ತಿದ್ದುಪಡಿ ಮಾಡಲಾಗುತ್ತದೆ.ಕೊಡಗು ಜಿಲ್ಲೆಯ ಮೂರ್ನಾಡು ಹಾಗೂ ಸುಳ್ಯ ತಾಲೂಕಿನ ಗುತ್ತಿಗಾರ್ನಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ದಿನೇಶ ಮಡಪ್ಪಾಡಿ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ, ನಿರ್ದೇಶಕರಾದ ಪಿ.ಸಿ. ಜಯರಾಮ, ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ
ತೀರ್ಥರಾಮ, ಚಂದ್ರ ಕೋಲ್ಚಾರ್. ಪಿ.ಎಸ್. ಗಂಗಾಧರ, ಲಕ್ಷ್ಮೀನಾರಾಯಣ ನಡ್ಕ, ಮೋಹನ್ರಾಂ ಸುಳ್ಳಿ, ದಾಮೋದರ ನಾರ್ಕೋಡು, ಜಯಲಲಿತಾ ಕೆ.ಎಸ್. ನಳಿನಿ ಸೂರಯ್ಯ, ಶೈಲೇಶ್ ಅಂಬೆಕಲ್ಲು, ದೊಡ್ಡಣ್ಣ ಬರೆಮೇಲು, ಪ್ರೇಮ ಕೆ.ಎಲ್. ಜ್ಞಾನೇಶ್ ಎನ್ ಎ, ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ ಉಪಸ್ಥಿತರಿದ್ದರು.












