ಸುಳ್ಯ:ಬಿಜೆಪಿಯವರು ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳ ಬಗ್ಗೆ ಅಪಹಾಸ್ಯ, ಟೀಕೆ ಮಾಡುವ ಬದಲು ಬಿಜೆಪಿಯವರು ಯಾರೂ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುವುದಿಲ್ಲ ಎಂದು ಸಾರ್ವಜನಿಕ ಹೇಳಿಕೆ ಕೊಡಲಿ ಎಂದು ಕೆಪಿಸಿಸಿ ಮಾಜಿ ಸದಸ್ಯ ಎಂ.ವೆಂಕಪ್ಪ ಗೌಡ
ಆಗ್ರಹಿಸಿದ್ದಾರೆ. ಸರಕಾರ ನೀಡುವ ಅದ್ಬುತ ಯೊಜನೆಗಳನ್ನು ಬಿಟ್ಟಿಭಾಗ್ಯ
ಎಂದು ಟೀಕೆ ಮಾಡುವುದು ಖಂಡನೀಯ. ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಬಿಜೆಪಿ ನಾಯಕರನ್ನೊಳಗೊಡಂತೆ ಯಾರೂ ಕೂಡಾ ಪಡೆದುಕೊಂಡಿಲ್ಲದಿದ್ದರೆ ಸಾರ್ವಜನಿಕವಾಗಿ ಹೇಳಿಕೆ ಕೊಡಲಿ. ಅದು ಬಿಟ್ಟು ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಗಳು ಎಲ್ಲರೂ ಅನುಭವಿಸಿ ಈ ರೀತಿ ಟೀಕೆ ಮಾಡುತ್ತಿರುವುದು ಎಡೆಬಿಡಂಗಿತನ ಎಂದು ವೆಂಕಪ್ಪ ಗೌಡ ಹೇಳಿದ್ದಾರೆ.
ಅರ್ಹ ಫಲಾನುಭವಿಗಳು ಗೃಹಜ್ಯೋತಿ ಯೋಜನೆ, ಶಕ್ತಿ, ಗೃಹಲಕ್ಷ್ಮಿ,ಅನ್ನಭಾಗ್ಯ ಯೋಜನೆಯನ್ನು ಎಲ್ಲರೂ ಅನುಭವಿಸುತ್ತಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ









