ಸುಳ್ಯ:ಸುಳ್ಯದ ಅರಂಬೂರು ಭಾರದ್ವಾಜಾಶ್ರಮದ ಶ್ರೀ ಕಾಂಚಿಕಾಮಕೋಟಿ ವೇದ ವಿದ್ಯಾಲಯದಲ್ಲಿ ಆನ್ ಲೈನ್ನಲ್ಲಿ ವೇದಾಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ವೇದವಾಹಿನಿ ಸಮ್ಮಿಲನ ಕಾರ್ಯಕ್ರಮ ನಡೆಯಿತು. ದೇಶದ ನಾನಾ ಭಾಗಗಳಿಂದ ನೂರಾರು ವೇದ ವಿದ್ಯಾರ್ಥಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವೇದವಿದ್ಯಾರ್ಥಿ ಹುಬ್ಬಳ್ಳಿ ಸುಬ್ರಹ್ಮಣ್ಯ ಭಟ್ ಅವರು
ಮಹಾ ಗಣಪತಿ ಹವನ ನೆರವೇರಿಸಿ ವೇದಮಂತ್ರಗಳನ್ನು ಪಠಿಸಿ ವೇದೋಪಾಸನೆ ಮತ್ತು ಸಂಗೀತದಿಂದ ನಾದೋಪಾಸನೆ ನಡೆಸಿದರು.ಕಾಸರಗೋಡಿನ ಹಿರಿಯ ವೈದ್ಯರಾದ ಡಾ.ವೆಂಕಟಗಿರಿ ದೀಪಪ್ರಜ್ವಲನೆ ಮಾಡಿ ಶುಭಹಾರೈಸಿದರು. ಹಿರಿಯ ಸಂಸ್ಕೃತ ವಿದ್ವಾಂಸರಾದ ಸಾಹಿತಿ ಕಡೆಂಗೋಡ್ಲು ಗೋಪಾಲಕೃಷ್ಣ ಭಟ್ ಅವರನ್ನು ಪದ್ಮಶ್ರೀ ಗಿರೀಶ್ ಭಾರದ್ವಾಜ್ ಸನ್ಮಾನಿಸಿದರು.ಹಿರಿಯ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಶುಭಹಾರೈಸಿದರು.

ವೇದವಾಹಿನಿ ಗುರುಗಳಾದ ವೆಂಕಟೇಶ ಶಾಸ್ತ್ರಿ ದಂಪತಿಗಳನ್ನು ವಿದ್ಯಾಲಯದ ವ್ಯವಸ್ಥಾಪಕರಾದ ರವಿಶಂಕರ್ ಭಾರದ್ವಾಜ್ ಗೌರವಿಸಿದರು. ವಿಟ್ಲ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಕೇಶ್ ಎನ್. ಮತ್ತು ಕಿಜಕ್ಕಾರ್
ಸುಬ್ರಹ್ಮಣ್ಯ ಭಟ್ ದಾನಿಗಳನ್ನು ಅಭಿನಂದಿಸಿದರು.
ಒಡಿಶಾದಿಂದ ಆಗಮಿಸಿದ ಸಂಬಿತ್ ಪಂಡಾ ಮತ್ತು ತಮಿಳುನಾಡಿನ ಕೃಷ್ಣ ಮೂರ್ತಿ ಅನಿಸಿಕೆ ವ್ಯಕ್ತ ಪಡಿಸಿದರು.
ಕಾಸರಗೋಡಿನ ಹಿರಿಯ ವೈದ್ಯರಾದ ಡಾ.ನಾಗರಾಜ ಭಟ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಅಶ್ವಿನಿ ಆದರ್ಶ ಮತ್ತು ವಿದ್ಯಾ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.












