ಅರಂತೋಡು:ಭಾರತ ಸರಕಾರದ ಬುಡಕಟ್ಟು ಮಂತ್ರಾಲಯ, ಟ್ರೈಪೆಡ್ ಹಾಗೂ DAY-NRLM (ಸಂಜೀವಿನಿ ಒಕ್ಕೂಟ) ಜೊತೆಗೂಡಿ ಅನುಷ್ಠಾನಗೊಳಿಸುತ್ತಿರುವ PM-VDVK ಯಡಿ ಉತ್ಪಾದಿಸುತ್ತಿರುವ ವಿವಿಧ ಉತ್ಪನ್ನಗಳ ಕರ್ನಾಟಕದ ಮೊತ್ತ ಮೊದಲ ಪ್ರಕೃತಿ VDVK ಮಾರ್ಟ್ ಆರಂತೋಡಿನಲ್ಲಿ ಉದ್ಘಾಟನೆಗೊಂಡಿತು.
ಈ VDVK ಮಾರ್ಟ್ ನಲ್ಲಿ ಜೆಲ್ಲೆಯ ವಿಶೇಷ ಉತ್ಪನ್ನಗಳಾದ
ಕಾಡು ಜೇನು, ಚಾಪೆ, ಹಾಳೆ ತಟ್ಟೆ, ಬಳ್ಳಿಗಳ ಬುಟ್ಟಿ,ತೆಂಗಿನ ಚಿಪ್ಪಿನ ಸೌಟು, ಕಾಡುನಲ್ಲಿ, ಗಾಂಧಾರಿ ಮೆಣಸು, ದೂಪ, ಕಾಡು ಅರಸಿನ, ದೇಸಿ ತುಪ್ಪ, ವಾಸ್, ಕ್ಯಾಂಡಲ್,ಮೀನಿನ ಕೂಳಿ,ಇನ್ನಿತರ ಹತ್ತು ಹಲವು ವಸ್ತುಗಳು ಲಭ್ಯವಿರಲಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ಲೋಕಾರ್ಪಣೆಗೊಳಿಸಿ VDVK ಯ ನೂತನ ಉತ್ಪನ್ನಗಳನ್ನು ಅನಾವರಣಗೊಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಆರಂತೋಡು ಪ್ರಕೃತಿ VDVK ಅಧ್ಯಕ್ಷರಾದ ಶೋಭಲತಾ ವಹಿಸಿದ್ದರು. ಕಾರ್ಯಕ್ರಮದಲ್ಲಿ

ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿವಾಧಿಕಾರಿ ಕೆ. ರಾಜಣ್ಣ ಹಾಗೂ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಶುಭ ಹಾರೈಸಿದರು. ವೇದಿಕೆಯಲ್ಲಿ ದುರ್ಗಾಮಾತಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ
ಪ್ರಮೀಳಾ ಉಪಸ್ಥಿತರಿದ್ದರು. ಒಕ್ಕೂಟ ಸದಸ್ಯೆ ರೇವತಿ ಯವರ ಪ್ರಾರ್ಥನೆ ಹಾಡಿದರು. ಆರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಮ್ ಆರ್ ಎಲ್ಲರನ್ನೂ ಸ್ವಾಗತಿಸಿ, ಜಿಲ್ಲಾ ಪಂಚಾಯಿತಿನ NRLM DPM ಹರಿಪ್ರಸಾದ್ ಗೌಡ ಪ್ರಾಸ್ತಾವಿಕ ವಾಗಿ ಮಾತನಾಡಿ ದರು.
ಮೇರಿ, ಅವಿನಾಶ್ ದೆಲ್ಲಾರಿಯೋ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮವನ್ನು ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಆರಂತೋಡು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಸ್ವಚ್ಛತಾ ಘಟಕ ಸಿಬ್ಬಂದಿಗಳು ಮತ್ತು ದುರ್ಗಾ ಮಾತಾ ಸಂಜೀವಿನಿ ಒಕ್ಕೂಟದ MBK ಸುಮತಿ ಅಡ್ಕಬಳೆ ಮತ್ತು ಒಕ್ಕೂಟದ ಪದಾಧಿಕಾರಿಗಳು ನೀಡಿದರು. TPM ಶ್ವೇತಾರವರು ಧನ್ಯವಾದ. ಸಮರ್ಪಿಸಿದರು .