ಸುಳ್ಯ:ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ತಂಡದ ವಾಯುಜಿತ್ ರೇಸಿಂಗ್ 7.0 ಗೋ-ಕಾಟ್೯ ಅನಾವರಣ ಕಾಯ೯ಕ್ರಮ ಫೆ.14 ರಂದು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಸಿಇಒ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ. ಉಜ್ವಲ್ ಯು.ಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಉಜ್ವಲ್ ಯು ಜೆ ಮಾತನಾಡಿ ತಂಡದ
ಶ್ರೇಷ್ಠ ಪರಿಶ್ರಮವನ್ನು ಪ್ರಶಂಶಿಸಿ, ವಾಯುಜಿತ್ ರೇಸಿಂಗ್ 7.0ವನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವಲ್ಲಿ ಅವರ ಅದ್ವಿತೀಯ ಕೌಶಲ್ಯವನ್ನು ಪ್ರಶಂಸೆ ಮಾಡಿದರು. ಅವರು ತಂಡಕ್ಕೆ ಸ್ಪಧೆ೯ಗೂ ಮೀರಿದ ಅನ್ವಯದತ್ತ ಸಾಗಲು, ವಾಣಿಜ್ಯೀಕರಣದತ್ತ ಗಮನ ಹರಿಸಲು ಸೂಚಿಸಿದರು.

ಪ್ರಾಂಶುಪಾಲರಾದ ಡಾ. ಸುರೇಶ್ ವಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಪ್ರಯತ್ನ ಮತ್ತು ತಂಡದ ಇಂಜಿನಿಯರಿಂಗ್ ಸಾಮರ್ಥ್ಯವನ್ನು ಪ್ರಶಂಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಕಾಮತ್, ತಂಡದ ಕ್ಯಾಪ್ಟನ್ ಜೈರಾಜ್ ವಾಯುಜಿತ್ ರೇಸಿಂಗ್ ಬಗ್ಗೆ ವಿವರಿಸಿದರು. ವಿದ್ಯಾಥಿ೯ ದಿವಿನ್ ಕುಮಾರ್ ಸ್ವಾಗತಿಸಿ, ವಚನಾ ಎಮ್ ಸಿ ವಂದಿಸಿದರು. ಧನ್ಯಾಶ್ರೀ ಎಂ. ಎಸ್ ಮತ್ತು ಪೃಥ್ವಿರಾಜ್ ಯು ಎಮ್ ಕಾರ್ಯಕ್ರಮ ನಿರೂಪಿಸಿದರು.
