ಸುಳ್ಯ: ಮನೆ ಮನೆಗಳಲ್ಲಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ತಿಳಿಸುವ ಕಾರ್ಯ ನಡೆಯಬೇಕು ಆ ಮೂಲಕ ಧರ್ಮ, ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕು ಎಂದು ಬೆಂಗಳೂರಿನ ಚೆನ್ನೇನಹಳ್ಳಿಯ ಜನ ಸೇವಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎ.ಎಸ್ ನಿರ್ಮಲ ಕುಮಾರ್ ಹೇಳಿದ್ದಾರೆ. ಕೋಲ್ಚಾರು ಕುಟುಂಬಸ್ಥರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ
ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಶ್ರದ್ಧೆ ಭಕ್ತಿಯಿಂದ ದೇವರ ಕಾರ್ಯವನ್ನು ಮಾಡಿದರೆ ಶ್ರೇಯಸ್ಸು ಉಂಟಾಗುತ್ತದೆ. ಸಮಾಜ ಮುಖಿ ಕೆಲಸದಿಂದ ಸಾಧಕರಾಗಲು ಸಾಧ್ಯವಿದೆ. ಮುಂದಿನ ಪೀಳಿಗೆಗೆ ಸೇವೆಯೆಂಬ ಧೈಯ ಹಾಗೂ ಧರ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿಸುವ ಕೆಲಸವನ್ನು ಮಾಡುವುದರ ಮೂಲಕ ನಮ್ಮ ಧಾರ್ಮಿಕ ಪದ್ದತಿಗಳು ಚಿರಸ್ಥಾಯಿಯಾಗಲು ಹಿರಿಯರು ಮಾರ್ಗದರ್ಶನ ಮಾಡಬೇಕಾಗಿದೆ ಎಂದ ಅವರು ಜೀವನದಲ್ಲಿ ಪರೋಪಕಾರದ ಚಿಂತನೆ ಅಳವಡಿಸಿಕೊಂಡರೆ ಭಗವಂತನ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ. ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಸುತ್ರಿರುವುದರಿಂದ ನಾಡಿನ ಜನರಿಗೆ ದೇವರ ಅನುಗ್ರಹ ಉಂಟಾಗಲಿದೆ ಎಂದರು.

ವೇದಿಕೆಯಲ್ಲಿ ಕೋಲ್ಚಾರು ಕುಟುಂಬದ ಹಿರಿಯರಾದ ರಾಮಪ್ಪ
ಗೌಡ ಕೋಲ್ಚಾರು ಬಿಲ್ಲರಮಜಲು, ನಿವೃತ್ತ ಶಿಕ್ಷಕ ರಾಮಪ್ಪ ಮಾಸ್ತರ್ ಕೋಲ್ಚಾರು,ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪುರುಷೋತ್ತಮ
ಕೋಲ್ಚಾರು, ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರ
ಕೋಲ್ಚಾರು, ಸಂಚಾಲಕ ಸೋಮಶೇಖರ ಕೊಯಿಂಗಾಜೆ,
ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಅಧ್ಯಕ್ಷ
ಕುಂಞಿಕಣ್ಣ ಬೇಡಗ, ಸ್ಥಾನಿಕರಾದ ರಾಮಚಂದ್ರ ಬೆಳ್ಚಪ್ಪಾಡ, ಸಮಿತಿ ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು,ಸಮಿತಿ ಸಂಚಾಲಕ ಹರೀಶ್ ಕೊಯಿಂಗಾಜೆ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ,ಮೊದಲಾದವರು ಉಪಸ್ಥಿತರಿದ್ದರು. ವಿನಿತ್ ಕೋಲ್ಚಾರು ಪ್ರಾರ್ಥಿಸಿ ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು ಸ್ವಾಗತಿಸಿದರು. ಪದ್ಮ ಕೋಲ್ಚಾರು ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು ವಂದಿಸಿದರು.