ಮೇನಾಲ:ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದಲ್ಲಿ ಗುರುವಾರ ಹಗಲಿನ ವೇಳೆ ಕೋರಚ್ಚನ್ ದೈವ, ಕಂಡನಾರ್ ಕೇಳನ್ ದೈವಗಳು ಭಕ್ತರಿಗೆ ಅನುಗ್ರಹ ನೀಡಿ ಹರಸಿತು. ಶತಮಾನದ ಬಳಿಕ ನಡೆದ ದೈವಂಕಟ್ಟು ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಇಂದು ಹಗಲಿನ ವೇಳೆಯೂ ಸಾವಿರಾರು ಮಂದಿ ಹರಿದು ಬಂದರು. ಸಂಜೆ ವಯನಾಟ್ ಕುಲವನ್ ದೈವದ
ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆಗೆ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ವಿಷ್ಣುಮೂರ್ತಿ ದೈವ ಅಂಗಣ ಪ್ರವೇಶ ಮಾಡಿ ಭಕ್ತರಿಗೆ ಅನುಗ್ರಹ ನೀಡಲಿದೆ.ಬುಧವಾರ ರಾತ್ರಿಯಂತೆ ಗುರುವಾರ ಹಗಲು ಕೂಡ ಕೋರಚ್ಚನ್ ದೈವ, ಕಂಡನಾರ್ ಕೇಳನ್ ದೈವದ ದರ್ಶನ ಪಡೆಯಲು ಭಕ್ತ ಜನ ಸಮೂಹ ಹರಿದು ಬಂತು. ದಕ್ಷಿಣ ಕನ್ನಡ, ಕೊಡಗು ಹಾಗೂ ನೆರೆಯ ಕೇರಳ ರಾಜ್ಯದಿಂದ ಭಕ್ತರ ಗಡಣವೇ ಆಗಮಿಸಿತು.

ದೈವಂಕಟ್ಟು ಮಹೋತ್ಸವಕ್ಕೆ ಆಗಮಿಸಿದ ಭಕ್ತರ ಅನುಕೂಲಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆಗಮಿಸಿದ ಎಲ್ಲರಿಗೂ ನಿರಂತರ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.ವಾಹನ ಪಾರ್ಕಿಂಗ್ಗೂ ವಿವಿಧ ವ್ಯವಸ್ಥೆ ಮಾಡಲಾಗಿತ್ತು.
ಮಹೋತ್ಸವ ಸಮಿತಿ ಅಧ್ಯಕ್ಷ ಗುಡ್ಡಪ್ಪ ರೈ ಮೇನಾಲ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪರಿವಾರಕಾನ,ಶ್ರೀಕ್ಷೇತ್ರ ಕುತ್ತಿಕೊಲು ಅಧ್ಯಕ್ಷ ಆರ್.ಕುಂಞಿಕಣ್ಣನ್, ಮಹೋತ್ಸವ ಸಮಿತಿಯ
ಸಂಘಟನಾ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಕೋಶಾಧಿಕಾರಿ ರಾಮಕೃಷ್ಣ ರೈ ಮೇನಾಲ, ಸಂಚಾಲಕರಾದ ಸುಬೋದ್ ಶೆಟ್ಟಿ ಮೇನಾಲ, ಕಾರ್ಯಾಧ್ಯಕ್ಷರಾದ ರವೀಂದ್ರನಾಥ ರೈ ಮೇನಾಲ, ಜಗನ್ನಾಥ ರೈ ಮೇನಾಲ ಮುಂಬೈ, ಹರಿಪ್ರಕಾಶ್ ಗೌಡ ಕುರುಂಜಿ, ವಿಜಯಕುಮಾರ್ ತುದಿಯಡ್ಕ, ಸ್ಥಾನದ ಮನೆ ಅರ್ಚಕರಾದ ಯಂ.ಕೆ.ಕೃಷ್ಣ, ಪದಾಧಿಕಾರಿಗಳು, ಸಂಚಾಲಕರುಗಳು, ಸದಸ್ಯರುಗಳು, ಗ್ರಾಮಸ್ಥರು, ಮಹೋತ್ಸವ ಸಮಿತಿ, ಉಪಸಮಿತಿ, ಆಡಳಿತ ಸಮಿತಿ ಪದಾಧಿಕಾರಿಗಳು, ಮೇನಾಲ ಕುಟುಂಬಸ್ಥರು ಮತ್ತು ಪ್ರಮುಖರು ಉಪಸ್ಥಿತರಿದ್ದರು














