ಕಲ್ಲಪಳ್ಳಿ:ಪನತ್ತಡಿ ಬಾತೂರು ಶ್ರೀ ಭಗವತಿ ಕ್ಷೇತ್ರ ಕಯಗo, ಪನತ್ತಡಿ ತಾನತ್ತಿoಗಾಲ್ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುವ ಶ್ರೀ ವಯನಾಟ್ ಕುಲವನ್ ದೈವoಕಟ್ಟು ಮಹೋತ್ಸವಕ್ಕೆ
ಹಸಿರುವಾಣಿ ಸಮರ್ಪಣೆ ಮಾ.21ರಂದು ನಡೆಯಿತು. ಕಲ್ಲಪಳ್ಳಿ ಮೂಲೆಹಿತ್ಲು ಶ್ರೀ ವಯನಾಟ್ ಕುಲವನ್ ದೈವಸ್ಥಾನ ಹಾಗೂ
ಅರುಣಗುಂಜ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ವತಿಯಿಂದ ಕಲ್ಲಪ್ಪಳ್ಳಿಯ ಭಕ್ತರು ಹಸಿರುವಾಣಿ ಸಮರ್ಪಣೆ ಮಾಡಿದರು. ಮೆರವಣಿಗೆಯ ಮೂಲಕ ಹಸಿರುವಾಣಿ ಸಮರ್ಪಣೆ ಮಾಡಲಾಯಿತು. ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಮಾ.21ರಿಂದ 23ರ ತನಕ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ನಡೆಯಲಿದೆ.