ಸುಳ್ಯ:ಕೋಲ್ಚಾರು ಕುಟುಂಬಸ್ಥರ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಭಕ್ತಿ ಸಂಭ್ರಮ ಸಡಗರದಿಂದ ನಡೆಯುತಿದೆ. ಮೇ.18 ರಂದು ಬೆಳಿಗ್ಗೆ ಮೊದಲಿಗೆ ಶ್ರೀ ಕಾರ್ನೋನ್ ದೈವ ನಡೆಯಿತು. ಬಳಿಕ ಶ್ರೀ ಕೋರಚ್ಚನ್ ದೈವ ಶ್ರೀ ಕಂಡನಾರ್ ಕೇಳನ್ ದೈವಗಳು ಭಕ್ತರನ್ನು ಅನುಗ್ರಹಿಸಲಿದೆ. ಸಂಜೆ 3ರಿಂದ ಮಹೋತ್ಸವದ ಬಹುಮುಖ್ಯ ಭಾಗವಾದ ಶ್ರೀ ವಯನಾಟ್
ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಲಿದೆ.ಅಪರಾಹ್ನ 4ರಿಂದಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ.ರಾತ್ರಿ ಮರ ಪಿಳರ್ಕಲ್, ನಂತರ ಕೈವೀದು ನಡೆಯುವುದರೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.
ದೈವಗಳ ವೆಳ್ಳಾಟಂ ಕಣ್ತುಂಬಿಕೊಂಡ ಸಾವಿರಾರು ಭಕ್ತರ ಗಡಣ:
ಮೇ 17 ರಂದು ಸಂಜೆ ತರವಾಡು ದೈವಸ್ಥಾನದಿಂದ ಭಂಡಾರ ತರಲಾಯಿತು.ಬಳಿಕ ಶ್ರೀ ಕಾರ್ನೋನ್ ದೈವದ ವೆಳ್ಳಾಟ್ಟಂ, ಕೋರಚ್ಛನ್ ದೈವದ ವೆಳ್ಳಾಟ್ಟಂ, ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ, ಶ್ರೀ ವಿಷ್ಣಮೂರ್ತಿ ದೈವದ ತೊಡಂಙಲ್, ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಿತು. ಸಾವಿರಾರು ಭಕ್ತರು ದೈವಂಕಟ್ಟು ಮಹೋತ್ಸವಕ್ಕೆ ಆಗಮಿಸಿದ್ದಾರೆ. ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಸಾವಿರಾರು ಭಕ್ತರು ರಾತ್ರಿ ದೈವಗಳ ವೆಳ್ಳಾಟಂ ಕಣ್ತುಂಬಿಕೊಂಡರು.ದೈವಸ್ಥಾನದ
ಆಡಳಿತ ಸಮಿತಿ ಅದ್ಯಕ್ಷ ಪುರುಷೋತ್ತಮ ಕೋಲ್ಚಾರು, ಶ್ರೀ ತಂಬುರಾಟಿ ಭಗವತಿ ಕ್ಷೇತ್ರ, ಕುತ್ತಿಕೋಲು ಆಡಳಿತ ಮಂಡಳಿ ಅಧ್ಯಕ್ಷ ಕುಂಞಿಕಣ್ಣ ಬೇಡಗ ,ಉತ್ಸವ ಸಮಿತಿ ಅಧ್ಯಕ್ಷ ಭಗೀರಥ ಕೋಲ್ಚಾರು ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರ ಕೋಲ್ಚಾರು ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಬಲ್ಯಾಡಿ ಕುಟುಂಬದ ಯಜಮಾನ ಕೂಸಪ್ಪ ಗೌಡ ಕೋಲ್ಚಾರು ,ಸಂಚಾಲಕರಾದ ಸೋಮಶೇಖರ ಕ್ಯೂಂಗಾಜೆ, ಜಯಪ್ರಕಾಶ್ ಕುಂಚಡ್ಕ, ಹರೀಶ್ ಕೊಯಿಂಗಾಜೆ ಉಪಾಧ್ಯಕ್ಷರುಗಳಾದ, ರೂಪಾನಂದ ಕೋಲ್ಚಾರು , ಶಿವಣ್ಣ ಕೋಲ್ಚಾರು, ಶ್ಯಾಮ ಸುಂದರ ಕೋಲ್ಚಾರು ಸಂಘಟನಾ ಕಾರ್ಯದರ್ಶಿ ರಾಧಾಕೃಷ್ಣ ಕೋಲ್ಚಾರು
ಕೋಶಾಧಿಕಾರಿ ಶಿವಪ್ರಸಾಧ್ ಕೋಲ್ಚಾರು, ಆಡಳಿತ ಸಮಿತಿ ಕಾರ್ಯದರ್ಶಿ ರಾಮಪ್ಪ ಮಾಸ್ತರ್ ಕೋಲ್ಚಾರು, ಆಡಳಿತ ಸಮಿತಿ ಕೋಶಾಧಿಕಾರಿ ಮಾಧವ ಗೌಡ ಕೋಲ್ಚಾರು, ಶ್ರಿ ತಂಬುರಾಟಿ ಭಗವತಿ ಆಲೆಟ್ಟಿ ಪ್ರಾದೇಶಿಕ ಸಮಿತಿ ಅದ್ಯಕ್ಷ ನಾರಾಯಣ ಬಾರ್ಪಣೆ ,ಸ್ಥಾನದ ಮನೆ ಅರ್ಚಕ ದಾಮೋದರ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಕೋಲ್ಚಾರು, ಕಾರ್ಯದರ್ಶಿ ನಾಗವೇಣಿ ಕೋಲ್ಚಾರು, ಖಜಾಂಜಿ ಗೋವರ್ಧಿನಿ ಕೋಲ್ಚಾರು, ಹಾಗೂ ಉಪಸಮಿತಿಗಳ ಸದಸ್ಯರುಗಳು,ಕೋಲ್ಚಾರು ಕುಟುಂಬಸ್ಥರು ಇದ್ದರು.