ಸುಳ್ಯ:ನಗರ ಸ್ವಚ್ಛತೆಗಾಗಿ ಸುಳ್ಯ ನಗರ ಪಂಚಾಯತ್ ಹಾಗೂ ಅಮರ ಸುಳ್ಯ ರಮಣೀಯ ಸುಳ್ಯ ತಂಡದ ನೇತೃತ್ವದಲ್ಲಿ ನಡೆಯುವ ವಾರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಗರ ಸ್ವಚ್ಛತೆಗಾಗಿ ವಾರದಲ್ಲಿ ಒಂದು ಗಂಟೆ ಮೀಸಲಿರಿಸುವ ಅಭಿಯಾನದ 44ನೇ ವಾರದ ಸ್ವಚ್ಛತಾ
ಕಾರ್ಯಕ್ರಮದಲ್ಲಿ ಸದರ್ನ್ ರೆಸಿಡೆನ್ಸಿಯಿಂದ ವೆಂಕಟರಮಣ ದೇವಸ್ಥಾನದ ರಸ್ತೆ ಹಾಗೂ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ವಾರದ ಪ್ರತಿ ಗುರುವಾರ ಬೆಳಿಗ್ಗೆ 7 ರಿಂದ 8 ಗಂಟೆಯ ತನಕ ಒಂದು ಗಂಟೆಗಳ ಕಾಲ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗುತಿದೆ. ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ನಗರ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಅಮರ ಸುಳ್ಯ ರಮಣೀಯ ಸುಳ್ಯ ತಂಡದ ಸದಸ್ಯರು ಭಾಗವಹಿಸಿದ್ದರು.








