ಸುಳ್ಯ: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಜಂಪ ರೋಪ ಸ್ಪರ್ದೆಯಲ್ಲಿ ಜಾಲ್ಸೂರು ಅಡ್ಕಾರಿನ ವನಸುಮ ವನವಾಸಿ ವಿದ್ಯಾರ್ಥಿ ನಿಲಯದ 9ನೇ ತರಗತಿಯ ವಿದ್ಯಾರ್ಥಿಗಳಾದ ಹನುಮಂತ, ನರೇಶ್, ಶಿವು 15 ಟೀಮ್ ಗಳಲ್ಲಿ ಅಂಡರ್ 17 ತ್ರೀಲೇಗ್ ಸ್ಪೀಡ್ ರಿಲೇಯಲ್ಲಿ
ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಮಂಜುನಾಥ, ಬಾಬು, ರಾಮು ಡಬಲ್ ಟಚ್ ಸ್ಪೀಡ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ, ಹಾಗೆಯೇ ಅಂಡರ14ಡಬಲ್ ಟಚ್ ಸ್ಪೀಡ್ ರಿಲೇಯಲ್ಲಿ ಸಂತೋಷ,ಪಂಕಜ್, ದೇವರಾಜ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿ ನಿಲಯದಿಂದ ಒಟ್ಟು 9 ವಿದ್ಯಾರ್ಥಿಗಳು ಭಾಗವಹಿಸಿದ್ದರು ಇವರೆಲ್ಲರೂ ಸಹ ಪಯಸ್ವಿನಿ ಅನುದಾನಿತ ಪ್ರೌಢಶಾಲೆ ಜಾಲ್ಸೂರು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.









