ಬನಾರಿ: ಗಡಿ ಪ್ರದೇಶವಾದ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ
ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಕಾರ್ಯಕ್ರಮವಾಗಿ ಪುಸ್ತಕ ಪ್ರೀತಿಯ ಪ್ರತಿಪಾದಕ, ಸಂಸ್ಕೃತಿಯ ಆರಾಧಕ ಸಮಾಜ ಸುಧಾರಕ, ಸಂಘದ ಮಾಜಿ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಅವರ ಸಂಸ್ಮರಣೆ ಹಾಗೂ
‘ಕೀ. ವ. ಕೇಶವ ಸಾಧನಾ ಪ್ರಶಸ್ತಿ ಪ್ರದಾನ’ ಸಮಾರಂಭ ಆ.16 ಶನಿವಾರ ಸಂಜೆ 5ರಿಂದ ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ. ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸ್ಮರಣಾರ್ಥ ನೀಡುವ ‘ಕೀ.ವ.ಕೇಶವ ಸಾಧನಾ ಪ್ರಶಸ್ತಿ’ಯನ್ನು ಶಿಕ್ಷಣ ಕ್ಷೇತ್ರದ ಹಿರಿಯರು ಹಾಗೂ ಕಲಾವಿದರಾದ ವೆಂಕಟರಮಣ ಮಾಸ್ತರ್ ದೇಲಂಪಾಡಿ ಅವರಿಗೆ ಪ್ರದಾನ ಮಾಡಲಾಗುವುದು. ಶ್ರೀ ಗೋಪಾಲಕೃಷ್ಣ ದೇವರ ಆರಾಧನೆಯ

ಬಳಿಕ ನಡೆಯುವ ಸಮಾರಂಭದಲ್ಲಿ ಚಂದ್ರಶೇಖರ ಏತಡ್ಕ ಸಂಸ್ಮರಣಾ ಭಾಷಣ ಮಾಡಲಿದ್ದಾರೆ.ಸಂಘದ ಅಧ್ಯಕ್ಷರಾದ ಡಾ.ರಮಾನಂದ ಬನಾರಿ ಮಂಜೇಶ್ವರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಮಣ್ಣ ಮಾಸ್ತರ್ ದೇಲಂಪಾಡಿ,ಎಂ.ರಮಾನಂದ ರೈ ದೇಲಂಪಾಡಿ, ನಾರಾಯಣ ದೇಲಂಪಾಡಿ ಮತ್ತಿತರರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ‘ಶ್ರೀಕೃಷ್ಣ ಕಾರುಣ್ಯ’
ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





