ಅರಂತೋಡು: ಅರಂತೋಡು ಬದ್ರಿಯಾ ಜುಮಾ ಮಸೀದಿಗೆ ಡಿ.8 ರಂದು ದ.ಕ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಅವರು ಬೇಟಿ ನೀಡಿದರು. ಈ ಹಿಂದೆ ವಕ್ಫ್ ಅನುದಾನದಿಂದ ನಿರ್ವಹಿಸಿದ ಕಾಮಗಾರಿಯನ್ನು ವೀಕ್ಷಿಸಿದರು. ಮಸಿದಿಯ ಆಡಳಿತ ಮಂಡಳಿಯ
ಕಛೇರಿಗೆ ಭೇಟಿ ನೀಡಿ ಜಮಾಅತ್ನಲ್ಲಿ ನಡೆಯುವ ಮಹಾಸಭೆ, ಸಾಮಾನ್ಯ ಸಭೆ , ಮದುವೆ ನೋದಣಿ, ಸದಸ್ಯರ ಪಟ್ಟಿ ಹಾಗೂ ಎಲ್ಲಾ ಕಡತಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಲು ಸಮಿತಿ ಪಧಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಟಿ.ಎಂ ಶಹೀದ್ ತೆಕ್ಕಿಲ್, ಅರಂತೋಡು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿ, ಪ್ರಧಾನ ಕಾರ್ಯದರ್ಶಿ ಕೆ.ಎಮ್ ಮೂಸಾನ್, ಅಮೀರ್ ಕುಕ್ಕುಂಬಳ, ಅಬ್ದುಲ್ ಖಾದರ್ ಪಟೇಲ್, ವಕ್ಫ್ ಇಲಾಖೆಯ, ಸಿಬ್ಬಂದಿ ಆಸಿಫ್ ಉಪಸ್ಥಿತರಿದ್ದರು.









