ಕೋಯಿಕ್ಕೋಡ್(ಕೇರಳ): ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ(ಐಒಎ) ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರ ಪತಿ ವಿ. ಶ್ರೀನಿವಾಸನ್ ಬೆಳಗಿನ ಜಾವ ಕೇರಳದ ಕೋಯಿಕ್ಕೋಡ್ನ ತಮ್ಮ ನಿವಾಸದಲ್ಲಿ ನಿಧನರಾದರು ಅವರಿಗೆ 67 ವರ್ಷ ವಯಸ್ಸಾಗಿತ್ತು.
ಬೆಳಗಿನ ಜಾವ ಮನೆಯಲ್ಲಿ
ಕುಸಿದುಬಿದ್ದ ಶ್ರೀನಿವಾಸನ್ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಾಯಿತು. ಆದರೂ ಅವರು ಬದುಕುಳಿಯಲಿಲ್ಲ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ನಿವೃತ್ತ ನೌಕರರಾದ ಶ್ರೀನಿವಾಸನ್ ಅವರು, ಉಷಾ ಅವರ ಕ್ರೀಡಾ ಮತ್ತು ರಾಜಕೀಯ ಜೀವನದುದ್ದಕ್ಕೂ ಜೊತೆಗಿದ್ದರು.ಶ್ರೀನಿವಾಸನ್ ಅವರನ್ನು ಉಷಾ ಅವರ ವೃತ್ತಿಪರ ಮೈಲಿಗಲ್ಲುಗಳ ಹಿಂದಿನ ಪ್ರೇರಕ ಶಕ್ತಿ ಮತ್ತು ಆಧಾರ ಸ್ತಂಭ ಎಂದು ಪರಿಗಣಿಸಲಾಗಿತ್ತು.





