ಕಾಸರಗೋಡು:ಕೇರಳ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರಿಗೆ ಕರ್ನಾಟಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಸನ್ಮಾನಿಸಿದರು. ಕಾಸರಗೋಡಿನ ಕುಂಬ್ಳೆಯಿಂದ
ತಿರುವನಂತಪುರಂ ತನಕ ನಡೆಯುವ ಕೇರಳ ರಾಜ್ಯ’ಹೊಸ ಯುಗ ಯಾತ್ರೆಯನ್ನು’ಪ್ರಾರಂಭಿಸಲು ಕಾಸರಗೋಡಿಗೆ ಆಗಮಿಸಿದ ವಿ ಡಿ ಸತೀಶನ್ ಅವರನ್ನು ಕಾಸರಗೋಡಿನ ಅತಿಥಿ ಗೃಹದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಶಹಿದ್ ಸತೀಶನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸತ್ ಸದಸ್ಯೆ ರಮ್ಯ ಹರಿದಾಸ್, ಇಂಟಕ್ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೋಜ್ ಎಡಾನಿ, ಕರ್ನಾಟಕ ಎನ್ಎಸ್ಯುಐ ನಾಯಕ ಟಿ ಎಂ ಶಾಜ್ ತೆಕ್ಕಿಲ್ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಪ್ರಿಯರಂಜನ್ ದಾಸ್ ಮುನ್ಶಿ, ರಮೇಶ್ ಚೆನ್ನಿತ್ತಲ,ಮನ್ಸೂರ್ ಖಾನ್, ರೋಜಿ ಎಂ ಜಾನ್ ಸಹಿತ ಹಲವಾರು ನಾಯಕರು ಭಾಗವಹಿಸಿದ್ದರು.







