ಸುಳ್ಯ: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ
ಯು ಟಿ ಖಾದರ್ ಅವರನ್ನು ಸುಳ್ಯದ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಮಂಗಳೂರಿನಲ್ಲಿ ಸನ್ಮಾನಿಸಲಾಯಿತು ಸನ್ಮಾನವನ್ನು ಸ್ವೀಕರಿಸಿದ ಯು ಟಿ ಖಾದರ್ ಅವರು ಮಾತನಾಡಿ
ವಿಧಾನಸಭಾಧ್ಯಕ್ಷರ ಹುದ್ದೆ ಸಾಂವಿಧಾನಿಕವಾಗಿ ಚೌಕಟ್ಟನ್ನು ಹೊಂದಿದ್ದರೂ
ಓರ್ವ ಜನಪ್ರತಿನಿಧಿಯಾಗಿ, ಶಾಸಕರಾಗಿ ಜಿಲ್ಲೆಯ ಮತ್ತು ನನ್ನ ಕ್ಷೇತ್ರದ
ಜನರ ಸಂಕಷ್ಟಗಳಿಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಜಾವಗಲ್ ಖಲಂದರ್ ಷಾ ದರ್ಗಾ ಶರೀಫ್ ಅಧ್ಯಕ್ಷ ಹಾಜಿ ಪಿ. ಇಸಾಕ್ ಸಾಹೇಬ್ ಪಾಜಪಳ್ಳ, ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್ ಸಂಶುದ್ದೀನ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಸ್ತಫ ಸುಳ್ಯ,ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ. ಎ.ಮಹಮ್ಮದ್,
ಸಂಪಾಜೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಕುoಞಿ ಗೂನಡ್ಕ,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಶೌವಾದ್ ಗೂನಡ್ಕ,
ಜಮೀಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮೂಸ ಕುoಞಿ ಪೈಂಬೆಚಾಲ್,ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ನ ಖಜಾಂಚಿ ಇಬ್ರಾಹಿಂ ,ಅರ್ ಟಿ ಐ ಕಾರ್ಯಕರ್ತ
ಹನೀಫ್ ಸಾಹೇಬ್,ದಕ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್,
ಮಂಗಳೂರು ಬ್ಯಾರೀಸ್ ಚೇಂಬರ್ ಅಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.