ಉತ್ತರಕಾಶಿ(ಉತ್ತರಾಖಂಡ):ಉತ್ತರಕಾಶಿಯ ಧರೇಲಿ ಗ್ರಾಮದ ಗಂಗೋತ್ರಿ ಮಾರ್ಗದಲ್ಲಿ ಸಂಭವಿಸಿರುವ ಭೀಕರ ಮೇಘಸ್ಫೋಟದಲ್ಲಿ, ಗ್ರಾಮದಲ್ಲಿನ ಮನೆಗಳು, ಮರ– ಗಿಡಗಳು, ಕಾರುಗಳು ಕೊಚ್ಚಿಕೊಂಡು ಹೋಗಿವೆ.ದುರಂತದಲ್ಲಿ 70ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೇಘಸ್ಫೋಟದ
ಭೀಕರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಧಾರಾಲಿ ಖೀರಗರ್ದ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಹರಿಯುತ್ತಿದ್ದ ಪರಿಣಾಮ, ಹಲವಾರು ಮನೆಗಳು ಕೊಚ್ಚಿ ಹೋಗಿವೆ.ಖೀರಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ ದಿಢೀರ್ ಪ್ರವಾಹ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.ಪ್ರವಾಸಿಗರು ಸೇರಿ ಹಲವು ಮಂದಿ ಕಟ್ಟಡಗಳ ಅವಶೇಷಗಳಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು ಮನೆಗಳು, ಹೋಟೆಲ್ಗಳು,ಹೋಂ ಸ್ಟೇಗಳು ಕೊಚ್ಚಿಕೊಂಡು ಹೋಗಿವೆ. ಪ್ರವಾಹದಿಂದಾಗಿ ನೀರು ಗ್ರಾಮಕ್ಕೆ ನುಗ್ಗುತ್ತಿರುವುದು ಹಾಗೂ ಮನೆಗಳಿಗೆ ಹಾನಿಯಾಗುತ್ತಿರುವುದನ್ನು ತೋರಿಸುವ ವಿಡಿಯೊಗಳು ಹರಿದಾಡುತಿವೆ. ಮಣ್ಣು ಮಿಶ್ರಿತ ನೀರು ಹಾಗೂ ಹೂಳು ತಗ್ಗು ಪ್ರದೇಶಗಳತ್ತ ನುಗ್ಗಿವೆ.





