ನವದೆಹಲಿ:2026–27ನೇ ಸಾಲಿನ ಕೇಂದ್ರ ಬಜೆಟ್ನ್ನು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಿದ್ದಾರೆ. 2026–27ನೇ ಸಾಲಿನ ಬಜೆಟ್ ಅನ್ನು 1 ಗಂಟೆ 25 ನಿಮಿಷದಲ್ಲಿ ಓದಿ ಮುಗಿಸಿದ್ದಾರೆ. ಈ ಬಾರಿ ಬಜೆಟ್ನಲ್ಲಿ ಸಿಕ್ಕಿದ್ದೇನು, ಯಾವುದೆಲ್ಲ ಇಳಿಕೆ ಮತ್ತು ಏರಿಕೆ ಎನ್ನುವ ಮಾಹಿತಿ ಇಲ್ಲಿದೆ.ಚರ್ಮದ ಆಮದು ಸುಂಕ ಇಳಿಕೆ ಮಾಡಲಾಗಿದ್ದು, ಪಾದರಕ್ಷೆ ಸೇರಿ ಚರ್ಮದ ಉತ್ಪನ್ನಗಳ ಬೆಲೆ
ಇಳಿಕೆಯಾಗಲಿದೆ,ಸಮುದ್ರ ಆಹಾರ,ಮೈಕ್ರೋಅವನ್, ಮೇಕ್ ಇನ್ ಇಂಡಿಯಾ ಅಡಿ ತಯಾರಾಗಿವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ಫೋನ್,ಖೇಲೊ ಇಂಡಿಯಾ ಅಡಿ ಕ್ರೀಡಾ ಸಾಮಗ್ರಿಗಳ ಬೆಲೆ ಇಳಿಕೆ, ಬೀಡಿ, ಬ್ಯಾಟರಿಗಳ ಮೇಲಿನ ಬೆಲೆ ಇಳಿಕೆ, ಸೋಲಾರ್ ಬಿಡಿಭಾಗ, ಪ್ಯಾನಲ್ ಬೆಲೆ ಇಳಿಕೆ ,7 ಕ್ಯಾನ್ಸರ್ ಔಷಧಗಳ ಮೇಲಿನ ಬೆಲೆ ಇಳಿಕೆ
ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಸುಂಕ ವಿಧಿಸಬಹುದಾದ ಎಲ್ಲಾ ಸರಕುಗಳ ಮೇಲಿನ ಸುಂಕ ದರವನ್ನು ಶೇಕಡಾ 20 ರಿಂದ ಶೇಕಡಾ 10 ಕ್ಕೆ ಇಳಿಸಲಾಗಿದೆ.
ಏರಿಕೆ:
ಸಿಗರೇಟ್, ಪಾನ್ ಮಸಾಲಾ ಏರಿಕೆ,ಆಮದಾಗುವ ಮದ್ಯಗಳ ಏರಿಕೆ,ಲಕ್ಷುರಿ ವಾಚ್ ಮೇಲಿನ ಸುಂಕ ಹೆಚ್ಚಳ, ವಿಮಾನ ಬಿಡಿಭಾಗದ ಬೆಲೆ ಹೆಚ್ಚಳವಾಗಲಿದೆ.
ಆದಾಯ ತೆರಿಗೆ ಬದಲಾವಣೆ ಇಲ್ಲ:
ದೇಶದ ಮಧ್ಯಮ ವರ್ಗ, ಸಣ್ಣ ತೆರಿಗೆ ಪಾವತಿದಾರರ ನಿರೀಕ್ಷೆಯಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ನಲ್ಲಿ ಆದಾಯ ತೆರಿಗೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ವರ್ಷದ ಪರಿಷ್ಕರಣೆಯೇ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ 10ರಿಂದ ಹೊಸ ತೆರಿಗೆ ನೀತಿ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.ಆದಾಯಯ ತೆರಿಗೆ ಪಾವತಿದಾರರು ಪರಿಷ್ಕೃತ ತೆರಿಗೆ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 31 ರಿಂದ ಮಾರ್ಚ್ 31ರವರೆಗೆ ವಿಸ್ತರಿಸಿದ್ದಾರೆ. ಅಲ್ಲದೆ, ಆದಾಯ ತೆರಿಗೆ ಪಾವತಿ ವಿಳಂಬಕ್ಕೆ ಶೇ 10ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದ್ದು, ಶಿಕ್ಷೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.ಸಣ್ಣ ತೆರಿಗೆದಾರರಿಗೆ ನಿಯಮ ಆಧಾರಿತ ಸ್ವಯಂಚಾಲಿತ ತೆರಿಗೆ ಸಲ್ಲಿಕೆ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ವಿದೇಶ ಪ್ರವಾಸಗಳ ಮೇಲಿನ ಟಿಸಿಎಸ್ ಶೇ 2 ರಷ್ಟು ಇಳಿಕೆ ಮಾಡಿದ್ದಾರೆ. ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್ ದರವನ್ನು ಶೇ 5 ರಿಂದ ಶೇ 2ಕ್ಕೆ ಇಳಿಸಲಾಗಿದೆ.
ಮೋಟಾರು ಅಪಘಾತ ಸಂದರ್ಭಗಳಲ್ಲಿ ವಿಮೆ ಕ್ಲೇಮುಗಳಿಗೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.ಭಾರತದಲ್ಲಿ ವಾಸಿಸುವ ವಿದೇಶಿ ಪ್ರಜೆಗಳಿಗೆ ಐದು ವರ್ಷಗಳವರೆಗೆ ಭಾರತೇತರ ಗಳಿಕೆಯ ಮೇಲೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ಬಜೆಟ್ ಹೈಲೈಟ್ಸ್:
ಆರ್ಥಿಕ ಸುಸ್ಥಿರತೆಗೆ ಒತ್ತು ನೀಡಲಾಗಿದೆ.
ಶೇ 4.3 ರಷ್ಟು ವಿತ್ತೀಯ ಕೊರತೆ, ಏಪ್ರಿಲ್ 1ರಿಂದ ಹೊಸ ತೆರಿಗೆ ನೀತಿ ಜಾರಿಗೆ, ಆದಾಯ ತೆರಿಗೆ ಸಲ್ಲಿಕೆ ವಿಳಂಬಕ್ಕೆ ಶೇ 10ರಷ್ಟು ದಂಡ, ಶಿಕ್ಷೆ ಇಲ್ಲ, ವಿದೇಶ ಯಾತ್ರೆ ಕೈಗೊಳ್ಳುವವರಿಗಾಗಿ ಈವರೆಗೂ ಇದ್ದ ಟಿಡಿಎಸ್ ಮೊತ್ತ ಶೇ 2ಕ್ಕೆ ಇಳಿಕೆ. ಅನಿವಾಸಿ ಭಾರತೀಯರ ಆಸ್ತಿ ಮಾರಾಟದ ಮೇಲಿನ ಟಿಡಿಎಸ್ ಕಡಿತ,ಸಣ್ಣ ತೆರಿಗೆ ಪಾವತಿದಾರರಿಗೆ ಅನುಕೂಲ. ಮಾ.31ರ ತನಕ ಪರಿಷ್ಕೃತ ತೆರಿಗೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಾರೆ,
ಮೋಟಾರು ಅಪಘಾತ ಕ್ಲೇಮುಗಳಿಗೆ ತೆರಿಗೆ ವಿನಾಯಿತಿ, ಬಂಡವಾಳ ವೆಚ್ಚ 12.2 ಲಕ್ಷ ಕೋಟಿ.
ಬೆಂಗಳೂರು ಸೇರಿದಂತೆ ಏಳು ಹೈ ಸ್ಪೀಡ್ ರೈಲು ಯೋಜನೆ ಘೋಷಣೆ,
2ನೇ ಮತ್ತು 3ನೇ ಹಂತದ ನಗರಗಳಿಗಳಿಗಾಗಿ ಎಂಎಸ್ಎಂಇಗಳಿಗಾಗಿ ಕಾರ್ಪೊರೇಟ್ ಮಿತ್ರ ಯೋಜನೆ ಘೋಷಣೆ
ಕ್ಯಾನ್ಸರ್ ಸಂಬಂಧಿತ 17 ಔಷಧಿಗಳು, 7 ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 7 ಔಷಧಿಗಳ ಮೇಲೆ ತೆರಿಗೆ ವಿನಾಯಿತಿ.
ತಮಿಳುನಾಡು, ಕೇರಳ, ಮಧ್ಯ ಪ್ರದೇಶ ಮತ್ತು ಒಡಿಶಾದಲ್ಲಿ ಅಪೂರ್ವ ಖನಿಜಗಳ ಕಾರಿಡಾರ್ ಘೋಷಣೆ
ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ಖಾದಿ ಕೈಮಗ್ಗಗಳಿಗೆ ಉತ್ತೇಜನ.
ರಿಫಾರ್ಮ್ ಎಕ್ಸ್ಪ್ರೆಸ್ ಘೋಷಣೆ: ಉದ್ಯೋಗ ಸೃಷ್ಟಿ, ಉತ್ಪಾದನೆಗೆ ಉತ್ತೇಜನ, ಬೆಳವಣಿಗೆಗೆ ಉತ್ತೇಜನ.
ಮೀಸಲು ವ್ಯಾಪಾರ ಕಾರಿಡಾರ್ ಅಭಿವೃದ್ಧಿಗಾಗಿ ಮುಂದಿನ 5 ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲಾಗುವುದು. ಹಡಗು ದುರಸ್ತಿ ಕೇಂದ್ರಗಳನ್ನು ವಾರಣಾಸಿ ಮತ್ತು ಪಟ್ನಾದಲ್ಲಿ ಸ್ಥಾಪಿಸುವ ಉದ್ದೇಶ. ಜತೆಗೆ ಕರಾವಳಿ ಕಾರ್ಗೊ ಉತ್ತೇಜನ ಯೋಜನೆಯನ್ನು ಒಳನಾಡು ಜಲಮಾರ್ಗ ಮತ್ತು ಕರಾವಳಿಯಲ್ಲೂ ಜಾರಿಗೆ ತರಲಾಗುವುದು.
ಸೆಮಿ ಕಂಡಕ್ಟರ್ ವಲಯಕ್ಕಾಗಿ 40,000 ಕೋಟಿ ಮೀಸಲು
ಸೇವಾ ವಲಯದಲ್ಲಿ ಎಐ ಪರಿಣಾಮ ಅಧ್ಯಯನಕ್ಕೆ
ಉನ್ನತ ಮಟ್ಟದ ಸ್ಥಾಯಿ ಸಮಿತಿ ಘೋಷಣೆ: ಶೈಕ್ಷಣಿಕ್, ಔದ್ಯೋಗಿಕ ಮತ್ತು ಉದ್ಯಮದಲ್ಲಿ ಪರಿಣಾಮ ಕುರಿತ ಅಧ್ಯಯನ, ಈ ವಲಯಗಳು ಜಾಗತಿಕವಾಗಿ ಶೇ 10ರಷ್ಟು ಷೇರಿನೊಂದಿಗೆ ಜಾಗತಿಕವಾಗಿ ನಾಯಕತ್ವ ಸಾಧಿಸಲು ಸಾಧ್ಯವಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.
ಅನಿವಾಸಿ ಭಾರತೀಯರು ಪೋರ್ಟ್ ಪೋಲಿಯೊ ಹೂಡಿಕೆ ಯೋಜನೆಯಡಿ ಭಾರತದ ಷೇರುಗಳಲ್ಲಿ ಹೂಡಿಕೆಗೆ ಅವಕಾಶ.
ಕರ್ನಾಟಕ ಮತ್ತು ಕೇರಳವನ್ನು ಒಳಗೊಂಡು ಕರಾವಳಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ತೆಂಗು, ಗಂಧ, ಗೇರು ಬೆಳೆಗೆ ಉತ್ತೇಜನ
ಪ್ರಮುಖ ನಗರ ಮತ್ತು ಆರ್ಥಿಕ ಕೇಂದ್ರಗಳಲ್ಲಿ ಏಳು ಹೈ-ಸ್ಪೀಡ್ ರೈಲು ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪ್ರಯಾಣಿಕ ಹಾಗೂ ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುವಲ್ಲಿ ಈ ಕಾರಿಡಾರ್ ಘೋಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂಬೈ–ಪುಣೆ, ಪುಣೆ –ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಾಣಸಿ ಹಾಗೂ ವಾರಾಣಸಿ–ಸಿಲಿಗುರಿ ಪ್ರಸ್ತಾವಿತ ರೈಲು ಮಾರ್ಗಗಗಳು. ಇದು ಭಾರತದ ಹಣಕಾಸು ಹಬ್, ತಂತ್ರಜ್ಞಾನ ಕೇಂದ್ರ ಹಾಗೂ ಉತ್ಪಾದನಾ ಕ್ಲಸ್ಟರ್ಗಳನ್ನು ಬೆಸೆಯಲಿದೆ.





