ಹರಾರೆ:19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಅನ್ನು ಭಾರತ ಯುವಪಡೆ 100 ರನ್ಗಳಿಂದ ಗೆಲ್ಲುವ ಮೂಲಕ 6ನೇ ಭಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 411 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಇಂಗ್ಲೆಂಡ್ 40.2 ಓವರ್ಗಳಲ್ಲಿ
311 ರನ್ ಗಳಿಸಿ ಆಲ್ ಔಟ್ ಆಯಿತು. ಭಾರತಕ್ಕೆ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮೂಲಕ ಆಸರೆಯಾದರು. ಅವರು, 80 ಎಸೆತಗಳಲ್ಲಿ 15 ಬೌಂಡರಿ ಹಾಗೂ 15 ಸಿಕ್ಸರ್ ಸಹಿತ 175 ರನ್ ಕಲೆಹಾಕಿದರು.

ವೈಭವ್ ಸೂರ್ಯವಂಶಿ ಜೊತೆ ನಾಯಕ ಆಯುಷ್ ಮ್ಹಾತ್ರೆ (53), ವೇದಾಂತ್ ತ್ರಿವೇದಿ (30) ಹಾಗೂ ಅಭಿಗ್ಯಾನ್ ಕುಂದು (40) ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.
411 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್ ಬೆನ್ ಡಾವ್ಕಿನ್ಸ್ (66) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಕಾಲೆಬ್ ಫಾಲ್ಕನರ್ (115 ರನ್) ಗಳಿಸುವ ಮೂಲಕ ಹೋರಾಟ ನಡೆಸಿದರಾದರೂ, ಭಾರತ ನೀಡಿದ್ದ ಬೃಹತ್ ಗುರಿ ತಲುಪಲು ವಿಫಲವಾಗಿ, 100 ರನ್ಗಳ ಸೋಲು ಅನುಭವಿಸಿದರು. ಪ್ರಚಂಡ ಬ್ಯಾಟಿಂಗ್ ಮೂಲಕ ದಾಖಲೆ ನಿರ್ಮಿಸಿ ಗೆಲುವಿಗೆ ಕಾರಣರಾದ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.







