ಬ್ಲೂಮ್ಫೌಂಟೇನ್ (ದಕ್ಷಿಣ ಆಫ್ರಿಕಾ): ಬಾಂಗ್ಲಾದೇಶ ತಂಡವನ್ನು 84 ರನ್ ಅಂತರದಿಂದ ಮಣಿಸಿದ ಭಾರತ ತಂಡ, 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಬಾಂಗ್ಲಾ ಪಡೆ 167 ರನ್ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿತು.ಭಾರತ ನೀಡಿದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ
ವೇಗಿ ರಾಜ್ ಲಿಂಬಾನಿ ಮತ್ತು ಸ್ಪಿನ್ನರ್ ಸೌಮಿ ಪಾಂಡೆ ಆರಂಭಿಕ ಆಘಾತ ನೀಡಿದರು.ಬಾಂಗ್ಲಾ ತಂಡದ ಮೊತ್ತ 50 ರನ್ ಆಗುವಷ್ಟರಲ್ಲೇ ಅಗ್ರ ಕ್ರಮಾಂಕದ ನಾಲ್ವರು ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಜೊತೆಯಾದ ಮೊಹಮ್ಮದ್ ಶಿಯಾಬ್ ಜೇಮ್ಸ್ (54) ಮತ್ತು ಆರಿಫುಲ್ ಇಸ್ಲಾಂ (41) ಐದನೇ ವಿಕೆಟ್ ಪಾಲುದಾರಿಕೆಯಲ್ಲಿ 77 ರನ್ ಕಲೆಹಾಕಿ ಚೇತರಿಕೆ ನೀಡಿದರು. ಆದರೆ, ಈ ಜೊತೆಯಾಟವನ್ನು ಮುಷೀರ್ ಖಾನ್ ಮುರಿದರು. ಭಾರತ ಪರ ಸೌಮಿ ಪಾಂಡೆ ನಾಲ್ಕು ವಿಕೆಟ್ ಪಡೆದರೆ, ಮುಷೀರ್ ಖಾನ್ ಎರಡು ವಿಕೆಟ್ ಕಿತ್ತರು. ಉಳಿದ ಮೂರು ವಿಕೆಟ್ಗಳನ್ನು ರಾಜ್ ಲಿಂಬಾನಿ, ಅರ್ಶಿನ್ ಕುಲಕರ್ಣಿ ಮತ್ತು ಪ್ರಿಯಾಂಶು ಮೊಲಿಯಾ ಹಂಚಿಕೊಂಡರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ
96 ಎಸೆತಗಳಲ್ಲಿ 76 ರನ್ ಗಳಿಸಿ ಆದರ್ಶ್ ಸಿಂಗ್ 94 ಎಸೆತ ಎದುರಿಸಿ ನಾಯಕ ಉದಯ್ ಸಹರಾನ್ 64 ರನ್ ಗಳಿಸಿದರು. ಬಳಿಕ ಕ್ರೀಸ್ಗಿಳಿದ ಪ್ರಿಯಾಂಶು ಮೊಲಿಯಾ (23), ಅರಾವೆಲ್ಲಿ ಅವನೀಶ್ (23) ಮತ್ತು ಸಚಿನ್ ದಾಸ್ (ಅಜೇಯ 26) ಉಪಯಕ್ತ ಆಟವಾಡಿ, ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು..









