ಗುಲ್ಬರ್ಗ: ಗುಲ್ಬರ್ಗದ ಸೇಡಂನ ಕರ್ನಾಟಕ ಭವನದಲ್ಲಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಹಾಗೂ ಆಶ್ರಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇಡಂ ವತಿಯಿಂದ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ವ್ಯಕ್ತಿತ್ವ ವಿಕಸನ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ರಾಜ್ಯದಾದ್ಯಂತ
ಉಚಿತ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದ್ದು ಇದರ ಭಾಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಸಮಾಜಕಾರ್ಯ ಅಧ್ಯಯನ ವಿಭಾಗ ಗುಲ್ಬರ್ಗ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಡಾ. ರಾಜಶೇಖರ್. ಎಲ್ ಕಟ್ಟಿಮನಿ, ಪುರಸಭೆ ಸೇಡಂನ ಮುಖ್ಯ ಅಧಿಕಾರಿಗಳಾದ ಬಿ ಪ್ರಹ್ಲಾದ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಎಮ್ ಕೊನೇರಿ, ಆಶ್ರಯ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶಶಿಕಾಂತ ಬೇಡಸೂರ, ಆಶ್ರಯನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇಡಂ ಇದರ ಕಾರ್ಯದರ್ಶಿಗಳಾದ ಓಂ ಪ್ರಕಾಶ ಪಾಟೀಲ ತರಹಳ್ಳಿ, ಸ್ವಾಮಿ ವಿವೇಕಾನಂದ ಕಲಾ ಪದವಿ ಮತ್ತು ಸಮಾಜಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಂದೀಪ ಪ್ಯಾಟಿ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆಯ ನಿರ್ದೇಶಕರಾದ ಅಯ್ಯುಬ್ ಗೂನಡ್ಕ ಮತ್ತು ಮಂಜುನಾಥ ಆರ್ ಹಿರಿಯೂರು ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿ ವಿದ್ಯಾಥಿನಿಯರು ಭಾಗವಹಿಸಿದರು. ಕಾರ್ಯಕ್ರಮವನ್ನು ರೇವಣ್ಣ ಸಿದ್ದಪ್ಪ ಪಾಟೀಲ್ ನಿರೂಪಿಸಿದರು.