ಸುಳ್ಯ:ಮಾನವ ಸಂಪನ್ಮೂಲ ಅಭಿವೃದ್ಧಿಯ ಯುವ ಸಾಧಕರು, ಶಿಕ್ಷಣ ಪ್ರೇಮಿಯು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಉಮ್ಮರ್ ಬೀಜದಕಟ್ಟೆ ಅವರಿಂದ ಗುಲ್ಬರ್ಗದ ಸೇಡಂನಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ‘ವ್ಯಕ್ತಿತ್ವ ವಿಕಸನ’ (Personality Development) ಬಗ್ಗೆ ಒಂದು ದಿನದ ಉಚಿತ ತರಬೇತಿ ಕಾರ್ಯಕ್ರಮ ಸೆ.2 ರಂದು ನಡೆಯಲಿದೆ. ಈ ಕಾರ್ಯಕ್ರಮವನ್ನು ಗುಲ್ಬರ್ಗದ ಆಶ್ರಯ
ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇಡಂ ಅಧೀನದಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ಸಮಾಜ ಕಾರ್ಯ ಸ್ನಾತಕೋತರ ಮಹಾವಿದ್ಯಾಲಯ – ಸೇಡಂ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಹಾಗೂ ಆಶ್ರಯ ಬ್ಯುಸಿನೆಸ್ ಸರ್ವಿಸಸ್ ಇದರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಸೇಡಂ ವಿಧಾನ ಸಭಾ ಮಾಜಿ ಶಾಸಕರು, ಕಲ್ಬುರ್ಗಿ ವಿಬಾಗಿಯ ಪ್ರಭಾರಿಗಳು ಹಾಗೂ ಬಿಜೆಪಿ ರಾಜ್ಯ ವಕ್ತಾರರಾದ ರಾಜಕುಮಾರ ಪಾಟೀಲ ತೆಲ್ಕೂರು ಅವರು ಉದ್ಘಾಟಿಸಲಿದ್ದು, ಅನೇಕ ಗಣ್ಯಾತಿಗಣ್ಯರು ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.