ಸುಳ್ಯ: ತಾಲ್ಲೂಕಿನ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಜಾತಿ ಮತ್ತು ಬಣ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಸುಮಾರು 45 ಮಂದಿ ಬಿಜೆಪಿ ಗ್ರಾಮ ಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮಂಡಲ ಬಿಜೆಪಿ ಅಧ್ಯಕ್ಷ ಮತ್ತು
ಶಕ್ತಿ ಕೇಂದ್ರದ ಅಧ್ಯಕ್ಷರಿಗೆ ಸೋಮವಾರ ರಾಜಿನಾಮೆ ನೀಡಿದ್ದಾರೆ. ಕಾರ್ಯಕರ್ತರು ಆಗಮಿಸಿ ಬಿಜೆಪಿ ಮಂಡಲ ಸಮಿತಿ ಕಚೇರಿಯಲ್ಲಿ ರಾಜಿನಾಮೆ ಪತ್ರ ಸಲ್ಲಸಿದ್ದಾರೆ. ಉಬರಡ್ಕ ಮಿತ್ತೂರು ಸಹಕಾರಿ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆ ಸಂದರ್ಭ ರಾಜಕೀಯ ನಡೆದಿದೆ ಎಂದು ಆರೋಪಿಸಿರುವ ಕಾರ್ಯಕರ್ತರು ಗ್ರಾಮದ ಪಕ್ಷ ಸಂಘಟನೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷದ ಹಿತದೃಷ್ಟಿಯಿಂದ ಸೂಕ್ತವಲ್ಲ. ಕೆಲವೇ ಜನರ ಕಾಣದ ಕೈಗಳ ಆಟದಿಂದ ಕಾರ್ಯಕರ್ತರಾದ ನಾವು ತೀವ್ರ ನೊಂದಿದ್ದೇವೆ. ಇದನ್ನು ಸರಿಪಡಿಸಲು ಪಕ್ಷದ ಪ್ರಮುಖರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಮನನೊಂದು ಸ್ವಯಂಪ್ರೇರಿತರಾಗಿ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಕಾರ್ಯಕರ್ತರು
ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯ ಹಿನ್ನಲೆಯಲ್ಲಿ ಸಹಕಾರಿ ಸಂಘಕ್ಕೆ ನಿರ್ದೇಶಕರಾದ ರಾಜೇಶ್ ಭಟ್ ನೆಕ್ಕಿಲ ಮತ್ತು ಪ್ರಭಾಕರ ಅಮೈ ಅವರು ನಿರ್ದ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ರಾಜೀನಾಮೆ ಮಹತ್ವದ ಬೆಳವಣಿಗೆಯಾಗಿದೆ. ಇದರಿಂದ ಗ್ರಾಮ ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ.









