ಕ್ವಾಲಾಲಂಪುರ: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 19 ವರ್ಷದೊಳಗಿನವರ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ.ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ಎಡಗೈ ಸ್ಪಿನ್ನರ್ಗಳಾದ ಪರುಣಿಕಾ ಸಿಸೊಡಿಯಾ (21ಕ್ಕೆ3) ಮತ್ತು ವೈಷ್ಣವಿ ಶರ್ಮಾ(23ಕ್ಕೆ3) ಅವರ ಪರಿಣಾಮಕಾರಿ ದಾಳಿಯ ಬಲದಿಂದ
ಭಾರತ ತಂಡವು 9 ವಿಕೆಟ್ಗಳಿಂದ ಇಂಗ್ಲೆಂಡ್ ವಿರುದ್ಧ ಗೆದ್ದಿತು.ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪರುಣಿಕಾ ಮತ್ತು ವೈಷ್ಣವಿ ಅವರ ದಾಳಿಯ ಮುಂದೆ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 112 ರನ್ಗಳ ಸಾಧಾಣ ಮೊತ್ತ ಕಲೆಹಾಕಿತು.
ಗುರಿ ಬೆನ್ನಟ್ಟಿದ ಭಾರತ ತಂಡವು 15 ಓವರ್ಗಳಲ್ಲಿ 1 ವಿಕೆಟ್ಗೆ 117 ರನ್ ಗಳಿಸಿತು. ಜಿ. ಕಮಲಿನಿ (ಔಟಾಗದೆ 56; 50ಎ, 4X8) ಅವರ ಅರ್ಧಶತಕದ ಬಲದಿಂದ ಇನಿಂಗ್ಸ್ನಲ್ಲಿ ಇನ್ನೂ 5 ಓವರ್ಗಳು ಬಾಕಿಯಿದ್ದಾಗಲೇ ಜಯ ಗಳಿಸಿತು.
ಇನ್ನೊಂದು ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್ಗಳಿಂದ ಆಸ್ಟ್ರೇಲಿಯಾ ಎದುರು ಜಯಿಸಿತು. ತ್ರಿಷಾ ಅವರು 29 ಎಸೆತಗಳಲ್ಲಿ 35 ರನ್ ಗಳಿಸಿದರು.ಫೆಬ್ರುವರಿ 2ರಂದು ಬೆಯುಮಾಸ್ ಒವಲ್ ಕ್ರೀಡಾಂಗಣದಲ್ಲಿ ನಡೆ ಯಲಿರುವ ಫೈನಲ್ನಲ್ಲಿ ಉಭಯ ತಂಡಗಳು ಸೆಣಸಲಿವೆ.