ಸಂಪಾಜೆ:ಯುವಕರು ಸಮಾಜದ ಆಸ್ತಿ, ಯುವ ಜನಾಂಗ ಸಮಾಜದಲ್ಲಿ ಸಾಮರಸ್ಯ ಹಾಗು ಸಹೋದರತೆಯನ್ನು ಕಾಪಾಡಿ ಒಳ್ಳೆಯ ಕೆಲಸ ಮಾಡಬೇಕು ಎಂದು ಕರ್ನಾಟಕ ಸರಕಾರದ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಸಂಪಾಜೆ ಗ್ರಾಮದ ಗೂನಡ್ಕ-ಪೇರಡ್ಕ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು

ಮಾತನಾಡಿದರು. ದರ್ಗಾ ಶರೀಫ್, ನವೀಕರಣಗೊಂಡ ಪುರಾತನ ಮಸೀದಿ, ಪ್ರವಾಸಿ ಮಂದಿರ, ರಸ್ತೆ,ಕಂಪೌಂಡ್ ನಿರ್ಮಾಣವನ್ನು ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಉರೂಸ್ ಸಮಿತಿಯ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಖತೀಬ್ ರಿಯಾಸ್ ಫೈಜಿ, ಉರೂಸ್ ಸಮಿತಿ ಕಾರ್ಯದರ್ಶಿ ಜಿ.ಕೆ ಹಮೀದ್ ಗೂನಡ್ಕ,ಟಿ ಎಂ ಬಾಬ ಹಾಜಿ ತೆಕ್ಕಿಲ್,ಪಾಂಡಿ ಅಬ್ಬಾಸ್, ಕಾರ್ಯದರ್ಶಿ ಟಿ ಎಂ ಅಬ್ದುಲ್ ರಾಝಕ್, ತೆಕ್ಕಿಲ್ ಮಹಮದ್ ಕುಂಞಿ ಪೇರಡ್ಕ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಸಾಜೀದ್ ಆಜ್ಹರಿ ತೆಕ್ಕಿಲ್,ಎಂ ಆರ್ ಡಿ ಎ ಅಧ್ಯಕ್ಷ ಜಾಕೀರ್ ಹುಸೇನ್, ಕೆಪಿಸಿಸಿಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಅಬುಶಾಲಿ ಗೂನಡ್ಕ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಎಸ್ ಕೆ ಹನೀಫ್, ಪಿ ಕೆ ಉಮ್ಮರ್ ಗೂನಡ್ಕ , ಖಲಂದರ್ ಎಲಿಮಲೆ, ಅಬ್ದುಲ್ ಖಾದರ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು.ಗಾಂಧಿ ಪುರಸ್ಕೃತ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಊರೂಸ್ ಸಮಿತಿ ಕಾರ್ಯದರ್ಶಿ ಹಾಗು ಅಭಿವೃದ್ಧಿಯ ಹರಿಕಾರ ಜಿ ಕೆ ಹಮೀದ್ ಗೂನಡ್ಕ ಅವರನ್ನು ವಿರೋಧ ಪಕ್ಷದ ಉಪ ನಾಯಕ ಯು ಟಿ ಖಾದರ್ ಸನ್ಮಾನಿಸಿದರು.