ಮೆಲ್ಬರ್ನ್:ಸಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳ ಮಧ್ಯೆ ಟಿ20 ವಿಶ್ವಕಪ್ನ ಹೈ ವೋಲ್ಟೇಜ್ ಪಂದ್ಯ ಇಂದು ನಡೆಯಲಿದೆ. ಸೂಪರ್- 12 ಹಂತದ ಬಿ ಗುಂಪಿನ ತಮ್ಮ ಮೊದಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿದೆ. ಭಾನುವಾರ ಎಂಸಿಜಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1:30 ಕ್ಕೆ ಪಂದ್ಯ
ಆರಂಭವಾಗಲಿದೆ. 2007ರ ಬಳಿಕ ಭಾರತ ಟಿ 20 ವಿಶ್ವಕಪ್ ಗೆದ್ದಿಲ್ಲ.
ಸೂಪರ್ 12 ಗುಂಪುಗಳು:
ಗುಂಪು 1: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ (ಆತಿಥೇಯ), ಇಂಗ್ಲೆಂಡ್, ನ್ಯೂಜಿಲೆಂಡ್, ಐರ್ಲೆಂಡ್, ಶ್ರೀಲಂಕಾ
ಗುಂಪು 2: ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್, ಜಿಂಬಾಬ್ವೆ
T20 ವಿಶ್ವ ಕಪ್ 2022 ರಲ್ಲಿ ಭಾರತದ ವೇಳಾಪಟ್ಟಿ:
ಭಾರತ vs ಪಾಕಿಸ್ತಾನ: 23ನೇ ಅಕ್ಟೋಬರ್, ಭಾನುವಾರ ಮಧ್ಯಾಹ್ನ 1:30 ಕ್ಕೆ
ಭಾರತ vs ನೆದರ್ಲ್ಯಾಂಡ್: 27ನೇ ಅಕ್ಟೋಬರ್, ಗುರುವಾರ ಮಧ್ಯಾಹ್ನ 12:30 ಕ್ಕೆ
ಭಾರತ vs ದಕ್ಷಿಣ ಆಫ್ರಿಕಾ: 30 ಅಕ್ಟೋಬರ್, ಭಾನುವಾರ ಸಂಜೆ 4:30 ಕ್ಕೆ
ಭಾರತ vs ಬಾಂಗ್ಲಾದೇಶ: 2ನೇ ನವೆಂಬರ್, ಬುಧವಾರ ಮಧ್ಯಾಹ್ನ 1:30 ಕ್ಕೆ ಕ್ಕೆ
ಭಾರತ vs ಜಿಂಬಾಬ್ವೆ: 6ನೇ ನವೆಂಬರ್, ಭಾನುವಾರ ಮಧ್ಯಾಹ್ನ 1:30 ಕ್ಕೆ
ಟಿ20 ವಿಶ್ವಕಪ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಎಲ್ಲಿ?
ಟಿ20 ವಿಶ್ವಕಪ್-2022 ರಲ್ಲಿ ಭಾರತ ತಂಡ ಆಡುವ ಪಂದ್ಯಗಳೂ ಸೇರಿದಂತೆ ಎಲ್ಲಾ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಸ್ಟಾರ್ ವಾಹಿನಿಯ ಚಾನೆಲ್ ಗಳಲ್ಲಿ ಲಭ್ಯವಿರುತ್ತದೆ, ಜೊತೆಗೆ ಡಿಸ್ನಿ ಹಾಟ್ಸ್ಟಾರ್ನಲ್ಲಿ ನೇರಪ್ರಸಾರ ಇರಲಿದೆ.