ನ್ಯೂಯಾರ್ಕ್: ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ಅನ್ನು 44 ಶತಕೋಟಿ ಡಾಲರ್ಗೆ (3.62 ಲಕ್ಷ ಕೋಟಿ)ಗೆ ಖರೀದಿಸುವ ಪ್ರಕ್ರಿಯೆಯನ್ನು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಗುರುವಾರ ತಡರಾತ್ರಿ ಪೂರ್ಣಗೊಳಿಸಿದ್ದಾರೆ.ಸಂಸ್ಥೆಯನ್ನು ಖರೀದಿಸುತ್ತಲೇ ಮಹತ್ವದ ತೀರ್ಮಾನ ಕೈಗೊಂಡಿರುವ ಮಸ್ಕ್, ಕಂಪನಿಯ ಉನ್ನತ ಮಟ್ಟದ
ಹುದ್ದೆಯಲ್ಲಿದ್ದ ಹಲವರನ್ನು ಕೈ ಬಿಟ್ಟಿದ್ದಾರೆ. ಟ್ವಿಟರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, ಭಾರತ ಮೂಲದ ಪರಾಗ್ ಅಗರವಾಲ್, ಕಾನೂನು ವ್ಯವಹಾರಗಳು ಮತ್ತು ನೀತಿ ವಿಭಾಗದ ಮುಖ್ಯಸ್ಥೆ ವಿಜಯಾ ಗದ್ದೆ, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರನ್ನು ಹುದ್ದೆಯಿಂದ ತೆರವು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಖರೀದಿ ಒಪ್ಪಂದವನ್ನು ಪೂರ್ಣಗೊಳಿಸುವ ವೇಳೆ ಅಗರವಾಲ್ ಮತ್ತು ಸೆಗಲ್ ಟ್ವಿಟರ್ನ ಸ್ಯಾನ್ ಫ್ರಾನ್ಸಿಸ್ಕೋದ ಪ್ರಧಾನ ಕಚೇರಿಯಲ್ಲಿದ್ದರು ಹೇಳಲಾಗಿದೆ. ಟೆಸ್ಲಾ ಇನ್ಕಾರ್ಪೊರೇಷನ್ ಸಂಸ್ಥೆ ಟ್ವಿ್ಟರ್ ಖರೀದಿಸುವ ಪ್ರಕ್ರಿಯೆಯನ್ನು ಉದ್ಯಮಿ ಎಲಾನ್ ಮಸ್ಕ್ ಪೂರ್ಣಗೊಳಿಸುವುದರೊಂದಿಗೆ ಒಪ್ಪಂದದ ಬಗೆಗೆ ಕಳೆದ ಆರು ತಿಂಗಳಿಂದ ನಡೆಯುತ್ತಿದ್ದ ವಿವಾದ ಕೊನೆಗೊಂಡಂತಾಗಿದೆ.