ಟರ್ಕಿ: ಟರ್ಕಿ-ಸಿರಿಯಾ ಗಡಿ ಪ್ರದೇಶದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ.
6.3 ತೀವ್ರತೆಯ ಭೂಕಂಪದಲ್ಲಿ ನಾಶ ನಷ್ಟಗಳು ಉಂಟಾಗಿದೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಎರಡು ವಾರಗಳ
ಹಿಂದೆ ದುರಂತ ಸಂಭವಿಸಿದ ಅದೇ ಪ್ರದೇಶದಲ್ಲಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿದೆ. ಹತಾಯ್ ಪ್ರಾಂತ್ಯದಲ್ಲಿ ಎರಡು ಕಿಲೋಮೀಟರ್ ಆಳದವರೆಗೆ ಕಂಪನದ ಅನುಭವವಾಗಿದೆ.ಕಟ್ಟಡಗಳಿಗೆ ಹಾನಿಯಾಗಿದೆ. ವಿಪತ್ತು ನಿರ್ವಹಣಾ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಫೆಬ್ರವರಿ 6 ರಂದು ಸಂಭವಿಸಿದ ಅಪಘಾತದಲ್ಲಿ 46000 ಜನರು ಸಾವನ್ನಪ್ಪಿದರು.