ಸಂಪಾಜೆ:ಅಡಿಕೆ ಬೆಳೆಗೆ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಐಸಿಎಆರ್ – ಐಐಹೆಚ್ಆರ್ ಸಂಸ್ಥೆಯು ಐಸಿಎಆರ್ – ಕೆವಿಕೆ, ದಕ್ಷಿಣ ಕನ್ನಡ ಸಹಯೋಗದಲ್ಲಿ ಸುಳ್ಯ ತಾಲೂಕಿನ ಬುಡಕಟ್ಟು ರೈತರಿಗೆ ಹೈ-ಟೆಕ್ ತೋಟಗಾರಿಕೆ ಕುರಿತ ಎರಡು ದಿನಗಳ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು
ಟಿಎಸ್ಪಿ (Tribal Sub Plan) ಯೋಜನೆಯ ಅನುದಾನದಡಿ ಆಯೋಜಿಸಿತು.ಡಾ.ಪ್ರಕಾಶ್ ಪಾಟೀಲ್ ನಿರ್ದೇಶಕರು (ಪ್ರಭಾರ), ಐಸಿಎಆರ್ – ಐಐ ಹೆಚ್ಆರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಟಿ. ಎಚ್. ಸಿಂಗ್ ಪ್ರಧಾನ ವಿಜ್ಞಾನಿ (ತರಕಾರಿ ಬೆಳೆಗಳು), ಡಾ. ವಿ. ಶಂಕರ್, ಪ್ರಧಾನ ವಿಜ್ಞಾನಿ(ತರಕಾರಿ ಬೆಳೆಗಳು),
ಡಾ. ಸೆಂತಿಲ್ ಕುಮಾರ್, ಮುಖ್ಯಸ್ಥರು, ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗ, ತರಕಾರಿ ಬೆಳೆಗಳಲ್ಲಿ ಅರ್ಕ ಮೈಕ್ರೋಬಿಯಲ್ ಕಾಂಸಾರ್ಟಿಯಾ (AMC) ಬಳಕೆಯ ವಿಧಾನವನ್ನು ಪ್ರದರ್ಶಿಸಿದರು.
ಡಾ. ವಿ.ಕೆ.ಜೆ. ರಾವ್, ನಿವೃತ್ತ ಪ್ರಧಾನ ವಿಜ್ಞಾನಿ (ವಿಸ್ತರಣೆ), ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗ, ಕೃಷಿ ಉದ್ಯಮ ಕುರಿತು ಉಪನ್ಯಾಸ ನೀಡಿದರು.ಡಾ. ಜಿ. ನಾರಾಯಣ ನಿವೃತ್ತ ಪ್ರಧಾನ ವಿಜ್ಞಾನಿ (ವಿಸ್ತರಣೆ), ಉತ್ಪಾದನೆ ಹಾಗೂ ಉತ್ಪಾದಕತೆ ಸುಧಾರಣೆಗೆ ವೈಜ್ಞಾನಿಕ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.
ಡಾ.ಚೇತನ್ ಕುಮಾರ್, ಹಿರಿಯ ವಿಜ್ಞಾನಿ (ಮಣ್ಣಿನ ವಿಜ್ಞಾನ), ಮಣ್ಣಿನ ಮಾದರಿ ಸಂಗ್ರಹಣೆ ಬಗ್ಗೆ ಮಾಹಿತಿ ನೀಡಿ, ಮಣ್ಣಿನ ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ ಮಾಡುವಂತೆ ತಿಳಿಸಿದರು.
ಡಾ.ವಿ.ಶಂಕರ್ ಕರಾವಳಿ ಕರ್ನಾಟಕಕ್ಕೆ ಸೂಕ್ತ ತರಕಾರಿ ಬೆಳೆಯ ಕುರಿತು ಮಾಹಿತಿ ನೀಡಿ, ರೈತರನ್ನು ATIC ಕೇಂದ್ರಕ್ಕೆ ಕರೆದೊಯ್ದು ಲಭ್ಯವಿರುವ ತಂತ್ರಜ್ಞಾನಗಳು ಹಾಗೂ ಉತ್ಪನ್ನಗಳ ಬಗ್ಗೆ ತಿಳುವಳಿಕೆ ನೀಡಿದರು.
ಡಾ.ರೀನಾ ರೋಸಿ ಥಾಮಸ್, ಪ್ರಧಾನ ವಿಜ್ಞಾನಿ (ಮಾಹಿತಿ ತಂತ್ರಜ್ಞಾನ), ತಂತ್ರಜ್ಞಾನ, ಬೆಳೆಗಳು ಹಾಗೂ ಸುಧಾರಿತ ಪದ್ಧತಿಗಳ ಮಾಹಿತಿಗಾಗಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರದರ್ಶಿಸಿದರು. ಬೆಂಗಳೂರಿನಲ್ಲಿ ನಡೆದ ತರಬೇತಿಯಲ್ಲಿ
ಸುಳ್ಯ ತಾಲೂಕಿನ ಆರು ಗ್ರಾಮ ಪಂಚಾಯತ್ ಗಳಿಂದ ಆಯ್ಕೆಯಾದ ಬುಡಕಟ್ಟು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರಿಗೆ ಪ್ರಮಾಣಪತ್ರ, ಬೀಜ ಕಿಟ್, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಸೂಕ್ಷ್ಮ ಪೋಷಕಾಂಶ ಮಿಶ್ರಣ, ತರಕಾರಿ ಸ್ಪೆಷಲ್ ಹಾಗೂ ತಾಂತ್ರಿಕ ಕೈಪಿಡಿ ವಿತರಿಸಲಾಯಿತು.
ಸುಳ್ಯ ತಾಲೂಕಿನ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಸಂಪಾಜೆ, ಲೋಚನಾ ಆಲೆಟ್ಟಿ,ಡಾ. ಟಿ. ಜೆ. ರಮೇಶ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ – ಕೆವಿಕೆ, ದಕ್ಷಿಣ ಕನ್ನಡ ಮತ್ತಿತರರು ಉಪಸ್ಥಿತರಿದ್ದರು.





