ಸುಳ್ಯ: ಕಾಡಾನೆ ಮರವನ್ನು ಮುರಿದು ವಿದ್ಯುತ್ ಲೈನ್ ಮೇಲೆ ಹಾಕಿದ್ದು ಸುಳ್ಯಕ್ಕೆ ವ್ಯತ್ಯಯಗೊಂಡಿದೆ.ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿ ಆನೆಗುಂಡಿಯಲ್ಲಿ ಬೃಹತ್ ಗಾತ್ರದ ಬೈನೆ ಮರವನ್ನು ಆನೆ ಮುರಿದು ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ವಿದ್ಯುಯ್ ಲೈನ್ ಮೇಲೆ
ಹಾಕಿದೆ.ಇದರಿಂದ ವಿದ್ಯುತ್ ಲೇನ್ಗೆ ಹಾನಿಯಾಗಿದ್ದು ಸುಳ್ಯಕ್ಕೆ ವಿದ್ಯುತ್ ಕಡಿತಗೊಂಡಿದೆ. ಇದನ್ನು ಸರಿಪಡಿಸಲು ಸುಮಾರು 2 ಗಂಟೆಗೂ ಹೆಚ್ಚು ಸಮಯ ಬೇಕಾಗಿದ್ದು ಸುಳ್ಯಕ್ಕೆ ವಿದ್ಯುತ್ ಸರಬರಾಜು ತಡವಾಗಲಿದೆ ಎಂದು ಮೆಸ್ಕಾಂ ಇಂಜಿನಿಯರ್ ತಿಳಿಸಿದ್ದಾರೆ.