ಸುಳ್ಯ: ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ವಿದ್ಯುತ್ ಲೈನ್ನ ಮೇಲೆ ಮರ ಬಿದ್ದು ಸುಳ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಅಂಮ್ಚಿನಡ್ಕದಲ್ಲಿ 33ಕೆವಿ ಲೈನ್ ನ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸುಳ್ಯ ಹಾಗೂ ಆಸುಪಾಸಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತವಾಗಿದ್ದು, ಮರ ತೆರವು ಕಾರ್ಯಚಾರಣೆ
ಪ್ರಗತಿಯಲ್ಲಿದೆ. 7.30ರ ಬಳಿಕ ವಿದ್ಯುತ್ ಸರಬರಾಜು ಪುನಸ್ಥಾಪನೆ ಆಗಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. 33 ಕೆವಿ ಬೆಳ್ಳಾರೆ ಗುತ್ತಿಗಾರು ಲೈನ್ ಮೇಲೆ ಪಾಲ್ತಾಡ್ ಎಂಬಲ್ಲಿ ಮರ ಬಿದ್ದು ಬೆಳ್ಳಾರೆ ಹಾಗೂ ಗುತ್ತಿಗಾರು ವಿತರಣಾ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ಮರ ತೆರವು ಕಾರ್ಯಚಾರಣೆ ಪ್ರಗತಿಯಲ್ಲಿದೆ. 8.30ರ ಬಳಿಕ ವಿದ್ಯುತ್ ಸರಬರಾಜು ಮರುಸ್ಥಾಪನೆ ಆಗಬಹುದು ಎಂದು ಮೆಸ್ಕಾಂ ಹೇಳಿದೆ.
ಶುಕ್ರವಾರ ಸಂಜೆಯಿಂದ ಬೀಸಿದ ಗಾಳಿ ಹಾಗೂ ಮಳೆಗೆ ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ಕಂಬಗಳಿಗೆ, ವಿದ್ಯುತ್ ಜಾಲಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಶುಕ್ರವಾರ ರಾತ್ರಿಯಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ. 30 ಹೆಚ್ಟಿ ಕಂಬ, 75 ಎಲ್ಟಿ ಕಂಬಗಳು ಮುರಿದು ಬಿದ್ದು ಹಾನಿ ಸಂಭವಿಸಿದೆ. 3 ಟಿಸಿ ಸ್ಟ್ರಕ್ಚರ್ಗೆ ಹಾನಿ ಉಂಟಾಗಿದ್ದು ವಿದ್ಯುತ್ ಜಾಲ ಅಸ್ತವ್ಯಸ್ತವಾಗಿದೆ. ಇದರಿಂದ ತಾಲೂಕಿನ ಬಹುತೇಕ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.





