ಸುಳ್ಯ: ಕೆವಿಜಿ ಐಪಿಎಸ್ನಲ್ಲಿ ಚಾಲಕರ ದಕ್ಷತೆಯನ್ನು ಹೆಚ್ಚಿಸಲು ಚಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗಾಗಿ ನವೆಂಬರ್ 13ರಂದು ಸುರಕ್ಷಿತ ಸವಾರಿ ಉಪಕ್ರಮ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕೆವಿಜಿ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಶ್ಶ್ರೀಧರ್ ಎಂ ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ವಿದ್ಯಾರ್ಥಿಗಳು ಹಾಗು ಚಾಲಕರಲ್ಲಿ
ಸಮಯ ಪಾಲನೆ, ಸಂಯಮ ಇರಬೇಕು ಮತ್ತು ಶಾಲಾ ಮಕ್ಕಳು ವಾಹನಗಳಲ್ಲಿ ಪ್ರಯಾಣಿಸುವಾಗ ಯಾವ ರೀತಿ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂಬ ಮಾಹಿತಿ ಹಾಗೂ ನಿದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಅರುಣ್ ಕುಮಾರ್, ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಶಾಲಾ ವಾಹನಗಳ ನಿರ್ವಹಣಾಧಿಕಾರಿ ಮುದ್ದಪ್ಪ, ಶಾಲಾ ಸಾರಿಗೆ ಸಂಯೋಜಕಿ ಭವ್ಯಾ ಕೆ, ಚಾಲಕರು, ನಿರ್ವಾಹಕರು, ಶಿಕ್ಷಕ- ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.ಎಂಟನೇ ತರಗತಿ ವಿದ್ಯಾರ್ಥಿನಿ ನಿಯಾ ಶೆಟ್ಟಿ ನಿರೂಪಿಸಿ ವಂದಿಸಿದರು.