ಸುಳ್ಯ: ಸುಳ್ಯ ನಗರ ಪಂಚಾಯತ್ ವತಿಯಿಂದ ಸರಬರಾಜು ಮಾಡಲಾಗುತ್ತಿರುವ ನೀರು ಕೆಸರು ಮಿಶ್ರಿತ ಕೆಂಪು ಬಣ್ಣದಿಂದ ಕೂಡಿದ್ದು ಕುಡಿಯಲು ಸೂಕ್ತವಾಗಿಲ್ಲ ಎಂದು ನಗರ ಪಂಚಾಯತ್ನ ಬೂಡು ವಾರ್ಡ್ನ ನಾಗರಿಕರು ದೂರಿದ್ದಾರೆ. ಹಲವು ಸಮಯದಿಂದ ಕೆಂಪು
ನ.ಪಂ. ನೀರು ಸರಬರಾಜಾಗುವ ನಳ್ಳಿಗಳ ಮೂಲಕ ಬರುವ ಕೆಂಪು ಮಿಶ್ರಿತ ನೀರು
ಮಿಶ್ರಿತ ನೀರು ಬರುತ್ತಾ ಇದೆ. ಇದೀಗ ಮಳೆಗಾಲ ಆರಂಭಗೊಂಡ ಬಳಿಕ ನ.ಪಂ. ನೀರು ಸರಬರಾಜಾಗುವ ನಳ್ಳಿಗಳ ಮೂಲಕ ತೀವ್ರ ತರಹದ ಕೆಸರು ಮಿಶ್ರಿತ ಕೆಂಪು ನೀರು ಬರುತಿದೆ. ಇದರಿಂದ ನೀರು ಕುಡಿಯಲು ಆಗದೆ ಜನರು ಸಮಸ್ಯೆಗೆ ಸಿಲುಕಿದೆ. ನಗರ ಪಂಚಾಯತ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಇದೀಗ ಕಲುಷಿತ ನೀರು ಕುಡಿಯುವ ಕಾರಣ ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.