ಸುಳ್ಯ:ಸುಳ್ಯ ನಗರ ಪಂಚಾಯತಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಬಳಿಕ ಪ್ರಥಮ ಸಾಮಾನ್ಯ ಸಭೆ ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಸದಸ್ಯರ
ಆಯ್ಕೆಯ ಕುರಿತು ಚರ್ಚೆಗಳು ನಡೆಯಿತು. ಅಧ್ಯಕ್ಷರುಸದಸ್ಯರ ಪಟ್ಟಿಯನ್ನು ವಾಚಿಸಿದರು. ಆಡಳಿತ ಪಕ್ಚದಿಂದ ನಾರಾಯಣ ಶಾಂತಿನಗರ, ಸುಧಾಕರ್, ಕಿಶೋರಿ ಶೇಟ್, ಸುಶೀಲ ಜಿನ್ನಪ್ಪ, ಶಿಲ್ಪಾ ಸುದೇವ್, ಪೂಜಿತಾ, ಪ್ರವೀತಾ ಪ್ರಶಾಂತ್, ವಿನಯಕುಮಾರ್ ಕಂದಡ್ಕ ಇವರ ಹೆಸರುಗಳನ್ನು ಸೂಚಿಸಲಾಯಿತು. ವಿಪಕ್ಷ ಸ್ಥಾನದಿಂದ ಎಂ ವೆಂಕಪ್ಪ ಗೌಡರವರು ಪಟ್ಟಿಯನ್ನು ನೀಡಿ ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಧೀರ ಕ್ರಾಸ್ತಾ ರವರನ್ನು ಸೂಚನೆ ಮಾಡಿದರು.ಈ ರೀತಿ ಒಟ್ಟು 11 ಮಂದಿ ಸದಸ್ಯರುಗಳ ಆಯ್ಕೆ ನಡೆಯಿತು.