ಸುಳ್ಯ: ಕಲ್ಚರ್ಪೆಯಲ್ಲಿ ಕಸ ಉರಿಸಲು ಅಳವಡಿಸಲಾದ ಮೆಷಿನ್ಗಳು ಕಾರ್ಯಪ್ರವೃತ್ತರಾಗಿದ್ದು ದಿನಂ ಪ್ರತಿ ಸುಮಾರು 500 ಕೆಜಿಯಷ್ಟು ಕಸ ಉರಿಸಲಾಗುತಿದೆ. ಈ ಕಸವನ್ನು ಉರಿಸಿ ಗ್ಯಾಸ್ ಉತ್ಪಾದನೆ ಮಾಡುವ ಬಗ್ಗೆ ಪ್ರಯೋಗಗಳು ನಡೆಯುತಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಬುಧವಾರ ನಡೆದ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿ ಮತ್ತು ಕಲ್ಚರ್ಪೆಯ ಯಂತ್ರಗಳ ಕಾರ್ಯಾಚರಣೆ ಕುರಿತು ನಡೆದ ಚರ್ಚೆಯಲ್ಲಿ ಸದಸ್ಯರ ಪ್ರಶ್ನೆಗೆ
ಅವರು ಉತ್ತರಿಸಿದರು. ಇದೀಗ ವಿದ್ಯುತ್ ಮತ್ತು ಜನರೇಟರ್ ಬಳಸಿ ಕಸ ಉರಿಸಲಾಗುತ್ತದೆ. ಈ ಕಸ ಉರಿಸಿದಾಗ ಗ್ಯಾಸ್ ಉತ್ಪಾದನೆ ಮಾಡುವ ತಾಂತ್ರಿಕತೆಯ ಪ್ರಯೋಗ ನಡೆಯುತ್ತದೆ. ಗ್ಯಾಸ್ ಉತ್ಪಾದನೆ ಆದ ಬಳಿಕ ಅದೇ ಗ್ಯಾಸ್ನಿಂದ ಮೆಷಿನ್ ಚಾಲನೆ ಮಾಡಿ ಕಸ ಉರಿಸಬಹುದು. ಇದರಿಂದ ಕಸ ವಿಲೇವಾರಿಯ ಖರ್ಚು ಉಳಿಸಬಹುದು. ಅಲ್ಲದೆ ಹೆಚ್ಚುವರಿಯಾಗಿ ದೊರೆಯುವ ಗ್ಯಾಸ್ನ್ನು ವಾಣೀಜ್ಯ ಉಪಯೋಗಕ್ಕೆ ಬಳಸಬಹುದು ಎಂದು ಯಂತ್ರಗಳನ್ನು ಅಳವಡಿಸಿದ ಕಂಪೆನಿಯವರು ತಿಳಿಸಿದ್ದಾರೆ. ಈ ಕುರಿತು ಪ್ರಯೋಗಗಳು ನಡೆಯುತ್ತಿದೆ ಎಂದು ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಕಲ್ಚರ್ಪೆಯ ಕಸ ವಿಲೇವಾರಿ ಘಟಕಕ್ಕೆ ಹೆಚ್ಚುವರಿಯಾಗಿ ಎರಡು ಎಕ್ರೆ ಸ್ಥಳ ದೊರೆಯಲಿದೆ.ಎರೆ ಹುಳು ಗೊಬ್ಬರ ತೊಟ್ಟಿ ಇದೆ,ಅಲ್ಲಿ ಎರೆಹುಳು ಗೊಬ್ಬರ ಘಟಕ ಸ್ಥಾಪಿಸುವ ಬಗ್ಗೆ ಯೋಜನೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಾವೂರು ವಾರ್ಡಿನಲ್ಲಿ ನೀರಿನ ಸಮಸ್ಯೆ ಹಾಗೂ ನಾವೂರು ಮುಖ್ಯ ರಸ್ತೆ ಕಾಂಕ್ರಿಟೀಕರಣದ ಬಗ್ಗೆ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಸಭೆಯ ಗಮನಕ್ಕೆ ತಂದರು. ನಾವೂರು ಗುಡ್ಡೆಗೆ ಕುಡಿಯುವ ನೀರಿನ ಬಾರಿ ಸಮಸ್ಯೆ ಇದೆ. ನಳ್ಳಿ ನೀರು ಮಧ್ಯರಾತ್ರಿಯಲ್ಲಿ ಬರುದರಿಂದ ಅಲ್ಲಿಯ ದಿನಗೂಲಿ ನೌಕರರು ನಿದ್ದೆ ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿ ಇದೆ. ಅಲ್ಲಿ ನೀರಿನ ಟ್ಯಾಂಕ್ ಮಾಡೇಕು ಎಂದು ಅವರು ಆಗ್ರಹಿಸಿದರು.
ನಾವೂರು ರಸ್ತೆ ತೀರಾ ಹದೆಗೆಟ್ಟಿದ್ದು ಟೆಂಡೆರ್ ಆದ 20 ಲಕ್ಷ ಅನುದಾನದ ಕಾಂಕ್ರೀಟ್ ರಸ್ತೆ ಕಾಮಗಾರಿ ಕೂಡಲೇ ಆರಂಭಿಸಲು ಒತ್ತಾಯಿಸಿದರು. 15 ದಿನದೊಳಗೆ ವರ್ಕ್ ಆರ್ಡರ್ ಕೊಟ್ಟು ಸಚಿವರು ಗುದ್ದಲಿ ಪೂಜೆ ಮಾಡಿ ಕಾಮಗಾರಿ ಆರಂಭವಾಗಲಿದೆ ಎಂದು ಅಧ್ಯಕ್ಷರು ಭರವಸೆ ನೀಡಿದರು.
ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ಮುಖ್ಯಾಧಿಕಾರಿ ಸುಧಾಕರ, ಸದಸ್ಯರಾದ ಎಂ.ವೆಂಕಪ್ಪ ಗೌಡ,ಕೆ.ಎಸ್.ಉಮ್ಮರ್, ಸುಧಾಕರ, ಬಾಲಕೃಷ್ಣ ಭಟ್, ಶರೀಫ್ ಕಂಠಿ, ಬುದ್ಧ ನಾಯ್ಕ್, ಬಾಲಕೃಷ್ಣ ರೈ, ಡೇವಿಡ್ ಧೀರಾ ಕ್ರಾಸ್ತಾ, ಶಶಿಕಲಾ ನೀರಬಿದಿರೆ, ಪೂಜಿತಾ, ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ, ಪ್ರವಿತಾ ಪ್ರಶಾಂತ್, ನಾರಾಯಣ ಶಾಂತಿನಗರ, ಬೂಡು ರಾಧಾಕೃಷ್ಣ ರೈ, ಯತೀಶ್, ರೋಹಿತ್ ಕೊಯಿಂಗೋಡಿ ಚರ್ಚೆಯಲ್ಲಿ ಭಾಗವಹಿಸಿದ್ದರು.