ಸುಳ್ಯ:ಸುಳ್ಯ ನಗರ ಪಂಚಾಯಿತಿನಿಂದ ನಿರ್ಮಿಸಲ್ಪಟ್ಟ ಜ್ಯೋತಿ ಸರ್ಕಲ್ ನಿಂದ ನಿರೀಕ್ಷಣಾ ಮಂದಿರದ ರಸ್ತೆಯ ಬಲಬದಿಯಲ್ಲಿರುವ ನೂತನ ಉದ್ಯಾನವನಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹೆಸರನ್ನು ಇಡಲು ಹಾಗು ಅವರ ಪುತ್ಥಳಿಯನ್ನು ನಿರ್ಮಿಸಬೇಕು ಎಂದು
ಸುಳ್ಯ ಶ್ರೀರಾಮಪೇಟೆಯ ರಾಷ್ಟ್ರ ಅಭಿಮಾನಿಗಳ ಬಳಗದ ವತಿಯಿಂದ ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ರಾಷ್ಟ್ರ ಅಭಿಮಾನಿಗಳ ಪರವಾಗಿ ಸಂಚಾಲಕರಾದ ಉಮೇಶ್ ಪಿ.ಕೆ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ್ ರಾವ್ ಶ್ರೀದೇವಿ ನಾಗರಾಜ ಭಟ್ ನ್ಯಾಯವಾದಿ ಜಗದೀಶ್, ನಾರಾಯಣ ಎಸ್ ಎಂ ಇವರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.