ಸುಳ್ಯ: ಸುಳ್ಯ ನಗರ ಪಂಚಾಯತ್ ಬಜೆಟ್ ಪೂರ್ವಭಾವಿ ಸಭೆ ನಗರ ಪಂಚಾಯತ್ ಆಡಳಿತಾಧಿಕಾರಿ, ತಹಶೀಲ್ದಾರ್ ಎಂ.ಮಂಜುಳಾ ಅಧ್ಯಕ್ಷತೆಯಲ್ಲಿ ನಗರ ಪಂಚಾಯತ್ ಸಭಾಭವನದಲ್ಲಿ ಫೆ.3ರಂದು ನಡೆಯಿತು. ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳು, ಸದಸ್ಯರು,ಹಾಗೂ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.ನಗರ ಪಂಚಾಯತ್ ವ್ಯಾಪ್ತಿಯಲ್ಲಿ
ಸೂಡದಿಂದ ಅನುಮೋದನೆಗೊಂಡು ಕೊಡಲ್ಪಡುವ ಏಕ ನಿವೇಶನ ಮತ್ತಿತರ ದಾಖಲೆಗಳಿಗೆ ನಗರ ಪಂಚಾಯತ್ ಅಭಿವೃದ್ಧಿ ಶುಲ್ಕ ವಿಧಿಸುವಂತೆ ಸಲಹೆ ನೀಡಿದರು. ಈ ಕುರಿತು ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ತಹಶೀಲ್ದಾರ್ ನಗರ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ಪಂಚಾಯತ್ ತೆರಿಗೆ ಮತ್ತಿತರ ಆದಾಯ ಫಲಪ್ರದವಾಗಿ ಸಂಗ್ರಹಿಸಿ ನಗರ ಪಂಚಾಯತ್ ಸ್ವಂತ ಅನುದಾನ ಹೆಚ್ಚಿಸಿ ನಗರದ ಅಭಿವೃದ್ಧಿಗೆ ಬಳಸಬೇಕು ಎಂದು ಸಲಹೆ ನೀಡಲಾಯಿತು. ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ತಡೆಯಲು ಕ್ರಮ ಕೈಗೊಳ್ಳಬೇಕು. ಸುಳ್ಯ ನಗರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ತಯಾರಿಸಬೇಕು ಎಂದು ಸಲಹೆ ನೀಡಿದರು. ಈ ಹಿಂದಿನ ಬಜೆಟ್ನಲ್ಲಿ ಘೋಷಿಸಿದ ಕೆಲವು ಕಾಮಗಾರಿಗಳಿಗೆ ಮುಂದುವರಿದ ಅನುದಾನ ಮೀಸಲಿರಿಸಬೇಕು. ತುರ್ತು ಅಗತ್ಯವಿರುವ ಇತರ ಕೆಲಸಗಳನ್ನು ಬಜೆಟ್ನಲ್ಲಿ ಸೇರ್ಪಡೆಗೊಳಿಸಿ ಅನುದಾನ
ಮೀಸಲಿರಿಸಬೇಕು ಎಂದು ಸಲಹೆ ನೀಡಲಾಯಿತು.

ಫೆ.15 ರ ಒಳಗೆ ಬಾಕಿ ಇರುವ ತೆರಿಗೆ ಮತ್ತಿತರ ವಸೂಲಾತಿ ಸಂಗ್ರಹ ಮಾಡಬೇಕು. ಬಾಕಿ ಉಳಿಸಿರುವ ಪಾವತಿದಾರರಿಗೆ ನೋಟೀಸ್ ಜಾರಿ ಮಾಡಲು ತಹಶೀಲ್ದಾರ್ ಸೂಚಿಸಿದರು.
ಹಿಂದಿನ ಯೋಜನೆಗಳನ್ನು ಪೋರ್ಣಗೊಳಿಸಲು ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲು ಎಂದು ಮಾಜಿ ಸದಸ್ಯರುಗಳು ಆಗ್ರಹಿಸಿದರು.
ಶಾಸಕರು ಮತ್ತು ಸಂಸದರ ಅನುದಾನ, ಸರಕಾರದಿಂದ ವಿಶೇಷ ಅನುದಾನ ಪಡೆಯುವ ಪ್ರಯತ್ನ ನಡೆಸಬೇಕು ಮತ್ತು ಬಜೆಟ್ನಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದರು.
ಏಕ ನೀವೇಶನ ಮತ್ತಿತರ ವಿಷಯಗಳಲ್ಲಿ ಸರಕಾರದ ನಿಯಮಾನುಸಾರ ಅಭಿವೃದ್ಧಿ ಶುಲ್ಕ ವಿಧಿಸಬೇಕು ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ತಿಳಿಯ ಪಡಿಸಿ ಮುಂದೆ ಅಭಿವೃದ್ಧಿ ಶುಲ್ಕವನ್ನು ವಿಧಿಸಲು ಸೂಚಿಸಲಾಯಿತು. ಮುಖ್ಯಾಧಿಕಾರಿ ಬಸವರಾಜ್ ಹೆಚ್ ಆರ್ ಸ್ವಾಗತಿಸಿ ಕಾರ್ಯಕಲಾಪ ನಡೆಸಿಕೊಟ್ಟರು.
ಸಭೆಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಶಶಿಕಲಾ ನೀರಬಿದಿರೆ, ಮಾಜಿ ಸದಸ್ಯರಾದ ಬಾಲಕೃಷ್ಣ ಭಟ್, ಕಿಶೋರಿ ಶೇಟ್, ಸುಧಾಕರ ಕೆ, ಶೀಲಾ ಅರುಣ ಕುರುಂಜಿ, ಸುಶೀಲಾ ಜಿನ್ನಪ್ಪ, ಬಾಲಕೃಷ್ಣ ರೈ ದುಗಲಡ್ಕ, ರಾಜು ಪಂಡಿತ್, ಧೀರಾ ಕ್ರಾಸ್ತಾ,ನಾರಾಯಣ ಶಾಂತಿನಗರ, ಪ್ರಮುಖರಾದ ಪಿ.ಗಣೇಶ್ ಭಟ್ ಸಿಎ, ಶಶಿಧರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ಮುರಳಿ ಮಾವಂಜಿ ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.





