ಸುಳ್ಯ: ಮಳೆ ಬಂದರೆ ನೀರು ಚರಂಡಿಯಲ್ಲಿ ಹರಿದು ಹೋಗದೆ ಕೆಸರು ನೀರೆಲ್ಲಾ ರಸ್ತೆಯಲ್ಲಿಯೇ ಶೇಖರಣೆಯಾಗುವುದು ಸುಳ್ಯ ನಗರದಲ್ಲಿ ಅಲ್ಲಲ್ಲಿ ಕಂಡು ಬರುತಿದೆ. ಅಲ್ಲಲ್ಲಿ ನೀರು ನಿಂತು ಸಾರ್ವಜನಿಕರ ಓಡಾಟಕ್ಕೆ
ಫಿನಾಯಿಲ್ ಹಾಕಿ ಪೈಪ್ ಲೈನ್ ಸ್ವಚ್ಚತಾ ಕಾರ್ಯ
ತೊಂದರೆ ಆಗುತ್ತಿದ್ದ ನೀರನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಸುಳ್ಯ ವಿವೇಕಾನಂದ ವೃತ್ತದ ಬಳಿ ಇರುವ ಕಂದಾಯ ನಿರೀಕ್ಷಕರ ಕಚೇರಿ ಬಳಿ ಅಲ್ಲಲ್ಲಿ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ, ಜನ ಸಂಚಾರಕ್ಕೆ ಸಮಸ್ತೆ ಎದುರಾಗಿತ್ತು. ಇದನ್ನು ತೆರವು ಮಾಡಲಾಯಿತು. ಅಲ್ಲಲ್ಲಿ ನೀರು ತುಂಬಿದ್ದ ಹೊಂಡಗಳನ್ನು ಮುಚ್ಚಲಾಯಿತು.