ಸುಳ್ಯ:ಲೋಕಸಭಾ ಚುನಾವಣೆಯಲ್ಲಿ ದ.ಕ.ಲೊಕಸಭಾ ಕ್ಷೇತ್ರದಲ್ಲಿ ಮೊದಲ ಎರಡು ಗಂಟೆಯಲ್ಲಿ ಶೇ.14.33 ಮತದಾನವಾಗಿದೆ. 7 ಗಂಟೆಗೆ ಮತದಾನ ಆರಂಭಗೊಂಡಿದ್ದು 9 ಗಂಟೆಯ ವೇಳೆಗೆ 2,60,553 ಮತದಾರರು ಮತ ಚಲಾಯಿಸಿದ್ದು ಶೇ. 14.33 ಮತದಾನ ಆಗಿದೆ. ಸುಳ್ಯದಲ್ಲಿ ಅತೀ ಹೆಚ್ಚು ಅಂದರೆ ಶೇ. 16.46 ಮತದಾನ ಆಗಿದೆ.
ಬೆಳ್ತಂಗಡಿ14.7, ಮೂಡಬಿದ್ರೆ 12.2, ಮಂಗಳೂರು ಉತ್ತರ 14.37, ಮಂಗಳೂರು ದಕ್ಷಿಣ 13.16, ಮಂಗಳೂರು 14.9, ಬಂಟ್ವಾಳ 15.24, ಪುತ್ತೂರು 13.74 ಶೇಖಡಾ ಮತದಾನ ಆಗಿದೆ.ದ.ಕ.ಕ್ಷೇತ್ರದಲ್ಲಿ18,18,127 ಮತದಾರರಿದ್ದಾರೆ.