ಮಂಗಳೂರು: ನಗರದ ತುಳುಭವನದಲ್ಲಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 360 ಲಕ್ಷ ರೂ.ಗಳ ಅನುದಾನದಿಂದ ನಿರ್ಮಿಸಲಾದ ತುಳುಭವನದ ಹೆಚುವರಿ ಕಾಮಗಾರಿಗಳನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನಗಳು ನಡೆಯುತಿದೆ. ಇದಕ್ಕಾಗಿ ಹಲವಾರು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ, ಅದಕ್ಕೆ ಹಲವು
ಹಂತಗಳು ಇವೆ, ಆ ಪ್ರಕ್ರಿಯೆಗಳೆಲ್ಲಾ ಸಾಗುತ್ತಿದ್ದು, ಅದಕ್ಕೆ ಸಮಯ ಬೇಕಿರುವ ಕಾರಣ ಮುಂಬರುವ ದಿನಗಳಲ್ಲಿ ಆ ಪ್ರಯತ್ನ ಫಲಕಾರಿಯಾಗಲಿದೆ ಎಂದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ. ಸೋಮಶೇಖರ್ ಅವರು ಮಾತನಾಡಿ, ಕನ್ನಡ – ತುಳು ಸಹೋದರ ಭಾಷೆಗಳು, ಈ ಎರಡು ಭಾಷೆಗಳ ನಡುವೆ ಸಾಮರಸ್ಯದ ಕೂಟವಿದೆ. ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುವಿನಲ್ಲಿ ಗ್ರಾಮೀಣ ಪ್ರದೇಶದ ಮಣ್ಣಿನ ಸೊಗಡಿದೆ, ಮೂಲತಃ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆಯ ಬಳಕೆ ಹೆಚ್ಚು ಎಂದು ಹೇಳಿದರು.
ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮ, ಮಹಾನಗರ ಪಾಲಿಕೆ ಸದಸ್ಯರಾದ ಸುಧೀರ್, ರಾಧಾಕೃಷ್ಣ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ವೇದಿಕೆಯಲ್ಲಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿದರು. ದಿನೇಶ್ ಸುವರ್ಣಾ ರಾಯಿ ನಿರೂಪಿಸಿ, ವಂದಿಸಿದರು.