ಸುಳ್ಯ: ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಸಹಕಾರದಲ್ಲಿ ಇತ್ತೀಚೆಗೆ ಅಗಲಿದ ದಿ.ಪಿ.ಪ್ರಭಾಕರ ಅವರ ಸ್ಮರಣಾರ್ಥ ತುಳು ಹಾಸ್ಯಮಯ ನಾಟಕ ಆನ್ಮಗೆ..! ಜ.25ರಂದು ಸುಳ್ಯ ಕೇರ್ಪಳ ಬಂಟರ ಭವನದಲ್ಲಿ ಪ್ರದರ್ಶನಗೊಂಡಿತಯ. ಖ್ಯಾತ ಪರಿಸರ ತಜ್ಞ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ನಾಟಕದಲ್ಲಿ

ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.ಅಮ್ಮ ಕಲಾವಿದೆರ್ ಕುಡ್ಲ
ಅಭಿನಯಿಸಿದ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ
‘ತುಳುನಾಡ ಕಲಾ ಸಿಂಧೂರ’ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ,
‘ತುಳುನಾಡ ಕಲಾಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ
‘ಕಾಮಿಡಿ ಕಿಲಾಡಿ ಖ್ಯಾತಿ’ಯ ಪಿಂಕಿರಾಣಿ ಅಭಿನಯದಲ್ಲಿ
‘ರಂಗ್ದ ರಾಜೆ’ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ಆನ್ಮಗೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡು ನೋಡುಗರನ್ನು ನಗೆಗಡಲಲ್ಲಿ ತೇಲಾಡಿಸಿತು. ರವಿ ಸುಂಕದಕಟ್ಟೆ ಸಂಗೀತ, ರವಿ ಎಂ.ಎಸ್. ವರ್ಕಾಡಿ ಸಮಗ್ರ ನಿರ್ವಹಣೆ, ಪ್ರಸಾದ್ ಕೊಯಿಲ ಪ್ರಸಾದನ ನಿರ್ವಹಿಸಿದ್ದರು.












