ಸುಳ್ಯ:ಚಲನಚಿತ್ರ ನಿರ್ದೇಶಕ ಸಂತೋಷ್ ಕೊಡೆಂಕೇರಿ ನಿರ್ದೇಶನದಲ್ಲಿ ದೃಷ್ಟಿ ಮೀಡಿಯಾ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಬಗ್ಗೆ ಹೊರ ತಂದ ಸಾಕ್ಷ್ಯಚಿತ್ರ ‘ಶತಮಾನಗಳ ನಂಬಿಕೆ ‘ ಭಕ್ತಿ ಮತ್ತು ಪರಂಪರೆಯ ಕಥೆ ಬಿಡುಗಡೆ ಸಮಾರಂಭ ನಡೆಯಿತು.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.ಸಾಕ್ಷ್ಯ ಚಿತ್ರದ
ನಿರ್ದೇಶಕ ಸಂತೋಷ್ ಕೊಡೆಂಕೇರಿ ಮಾತನಾಡಿ ಸಾಕ್ಷ್ಯ ಚಿತ್ರದ ಕುರಿತು ವಿವರ ನೀಡಿದರು. ತೂಗು ಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ, ವರ್ತಕರ ಸಂಘದ ಗೌರವಾಧ್ಯಕ್ಷ ಪಿ.ಬಿ.ಸುಧಾಕರ ರೈ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಸಾಹಿತಿ ಎ.ಕೆ.ಹಿಮಕರ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೊಡೆಂಕೇರಿ ಮಾತನಾಡಿದರು. ಪಾವನಾ ಸಂತೋಷ್ ಉಪಸ್ಥಿತರಿದ್ದರು.















