ತಿರುವನಂತಪುರಂ: 25 ಕೋಟಿ ಮೊದಲ ಬಹುಮಾನದ ಕೇರಳ ಸರಕಾರದ ತಿರುವೋಣಂ ಬಂಪರ್ ಟಿಕೆಟ್ನ ಡ್ರಾ ಇಂದು ನಡೆದಿದೆ. ಪ್ರಥಮ ಬಹುಮಾನ TH 577825 ಎಂಬ ಟಿಕೆಟ್ಗೆ ಲಭಿಸಿದೆ. ಇತರ ಸೀರಿಯಲ್ಗಳ ಇದೇ ನಂಬರ್ಗೆ 5 ಲಕ್ಷ ಸಮಾಧಾನಕರ ಬಹುಮಾನ ದೊರೆಯಲಿದೆ. ದ್ವಿತೀಯ ಬಹುಮಾನವಾಗಿ

20 ಮಂದಿಗೆ ತಲಾ ಒಂದು ಕೋಟಿ, ತೃತೀಯ ಬಹುಮಾನ 50 ಲಕ್ಷ ತಲಾ 20 ಮಂದಿಗೆ ಲಭಿಸಲಿದೆ. ನಾಲ್ಕನೇ ಬಹುಮಾನ ತಲಾ 5 ಲಕ್ಷ 10 ಸೀರಿಯಲ್ಗಳಿಗೆ, 5ನೇ ಬಹುಮಾನ ತಲಾ 2 ಲಕ್ಷ 10 ಸೀರಿಯಲ್ ಟಿಕೆಟ್ಗಳಿಗೆ ಲಭಿಸಲಿದೆ.
75 ಲಕ್ಷ ಟಿಕೆಟ್ ಮಾರಾಟ ಮಾಡಲಾಗಿತ್ತು.ಸೆ.27 ರಂದು ನಿಗದಿಯಾಗಿದ್ದ ಡ್ರಾ ದಿನಾಂಕ ಇಂದಿಗೆ ಮುಂದೂಡಲಾಗಿತ್ತು.












