ಪುತ್ತೂರು:ದಕ್ಷಿಣ ಕನ್ನಡ ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಪುತ್ತೂರು ಶಾಖೆಯಲ್ಲಿ ಶಾಖಾ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ತಿಮ್ಮಯ್ಯ ಪಿಂಡಿಮನೆ ಸೇವೆಯಿಂದ ನಿವೃತ್ತರಾಗಿದ್ದು ಅವರಿಗರ ಬೀಳ್ಕೊಡುಗೆ ಸಮಾರಂಭವು
ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಕಚೇರಿಯಲ್ಲಿ ನೆರವೇರಿತು. ಜೇನು ಸೊಸೈಟಿಯಲ್ಲಿ ಸುಮಾರು 30 ವರ್ಷಗಳ ಸೇವೆಯ ಬಳಿಕ ತಿಮ್ಮಯ್ಯ ಪಿಂಡಿಮನೆ ಅವರು ನಿವೃತ್ತರಾದರು.ಕಾರ್ಯಕ್ರಮದಲ್ಲಿ ಜೇನು ಸೊಸೈಟಿಯ ಅಧ್ಯಕ್ಷರಾದ ‘ಸಹಕಾರಿ ರತ್ನ’ ಚಂದ್ರ ಕೋಲ್ಚಾರ್ ಅವರು ಸನ್ಮಾನ ನೇರವೇರಿಸಿನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು . ಉಪಾಧ್ಯಕ್ಷರಾದ ರಾಜಾರಾಮ ಶೆಟ್ಟಿ, ನಿರ್ದೇಶಕರುಗಳಾದ ಶ್ಯಾಮ ಭಟ್, ಜನಾರ್ಧನ ಚೂಂತಾರು, ಡಿ. ತನಿಯಪ್ಪ ಗೌಡ,ಸುಂದರ ಗೌಡ,ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್,ಶ್ರೀಷ ಕೊಡವೂರು, ಇಂದಿರಾ ಕೆ, ಶಿವಾನಂದ, ಮನಮೋಹನ ಎ,ಪುಟ್ಟಣ್ಣ ಗೌಡ, ಶಂಕರ ಪೆರಾಜೆ, ಗೋವಿಂದ ಭಟ್, ಸರಸ್ವತಿ ವೈ.ಪಿ, ಸುಶೀಲ ಹಾಗೂ ಜೇನು ಸೊಸೈಟಿ ಸಿಬ್ಬಂದಿಗಳು ಮೊದಲದವರು ಉಪಸ್ಥಿತರಿದ್ದರು.













