ಸುಳ್ಯ: ಅರಂತೋಡಿನ ತೆಕ್ಕಿಲ್ಗ್ರಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಟಿ.ಎಂ ಶಹೀದ್ ಅವರ 50ನೇ ಹುಟ್ಟು ಹಬ್ಬದ ವರ್ಷಾಚರಣೆಯ ಸಂದರ್ಭದಲ್ಲಿ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಬಡ ಮಹಿಳೆಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ. “ಬೈತುಲ್ ಆಯಿಷಾ”ಮನೆಯ ಉದ್ಘಾಟನೆ ಮತ್ತು ಕೀ ಹಸ್ತಾಂತರ ಹಾಗು ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ಟರ್ ಇವರಿಗೆ “ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಸಮಾರಂಭ
ಫೆ.17ರಂದು ಸಂಜೆ 4ಕ್ಕೆ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಢಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 3 ದಶಕಗಳಿಂದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿ ಹತ್ತು-ಹಲವು ಜನಪರ ಹಾಗು ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರತಿಷ್ಠಾನ ಹಮ್ಮಿಕೊಂಡು ಬರುತ್ತಿದೆ ಎಂದು ಅವರು ವಿವರಿಸಿದರು.ಕಾರ್ಯಕ್ರಮದಲ್ಲಿ ದುವಾವನ್ನು ಪೇರಡ್ಕ ಜುಮಾ ಮಸೀದಿಯ ಖತೀಬರಾದ ರಿಯಾಝ್ ಪೈಝಿ ನೆರವೇರಿಸುವರು. ಮನೆಯ ಕೀ ಹಸ್ತಾಂತರ ಮತ್ತು “ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್-2020” ಪ್ರದಾನವನ್ನು ಕೇರಳ ಸರಕಾರದ ಬಂದರು ಮತ್ತು ಮೀನುಗಾರಿಕೆ ಸಚಿವರಾದ ಅಹಮ್ಮದ್ ದೇವರಕೋವಿಲ್

ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ತೆ ಕ್ಕಿಲ್ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎಂ.ಕೆ .ಎಂ ಅಶ್ರಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಧನಂಜಯ ಅಡಂಗಾಯ,ಹೆಚ್ಚುವರಿ ಎಡ್ವಕೇಟ್ ಜನರಲ್ ಸಿ, ಎಸ್. ಪೊನ್ನಣ್ಣ, ಜುಮಾ ಮಸೀದಿಯ ಖತೀಬರಾದ ಹಾಜಿ ಇಸಾಕ್ ಬಾಖವಿ, ಗೂನಡ್ಕ ಮಸೀದಿಯ ಖತೀಬರಾದ ಮಹಮ್ಮದ್ ಆಲಿಸಖಾಪಿ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ
ಯು.ಎಂ ಕಿಶೋರ್ ಕುಮಾರ್, ಎಂಜಿ.ಎಂ ಪೇರಡ್ಕದ ಮಾಜಿ ಅಧ್ಯಕ್ಷ ಟಿ.ಎಂ ಬಾಬಾ ಹಾಜಿ ತೆಕ್ಕಿಲ್, ನಾಸಿರ್ ಲಕ್ಕಿಸ್ಟಾರ್, ಇನಾಯತ್ ಆಲಿ ಮುಲ್ಕಿ, ಪಿ.ಸಿ ಜಯರಾಮ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಂ.ಜಾವೇದ್, ಹಾಜಿ ಟಿ.ಎಂ.ಅಬ್ದುಲ್ ರಜಾಕ್,ಅಬ್ದುಲ್ ಖಾದರ್ ಮೊಟ್ಟೆಂಗಾರ್ ಉಪಸ್ಥಿತರಿದ್ದರು.