ಅರಂತೋಡು: ತೆಕ್ಕಿಲ್ ಸೋಕರ್ ಲೀಗ್ 5ನೇ ಆವೃತ್ತಿಯ ಫುಟ್ಬಾಲ್ ಪಂದ್ಯಕೂಟ ಅರಂತೋಡು ಶಾಲಾ ಮೈದಾನದಲ್ಲಿ ನಡೆಯಿತು. ಅನಿವಾಸಿ ಉದ್ಯಮಿ ಹಬೀಬ್ ಗುಂಡಿ ಅರಂತೋಡು ಉದ್ಘಾಟನೆ ನೇರವೇರಿಸಿದರು. ಪಂದ್ಯಕೂಟದಲ್ಲಿ 6 ತಂಡಗಳು ಭಾಗವಹಿಸಿದ್ದವು. ಸಿ ಕೆ ಲೆಜೆಂಡ್ಸ್ ತಂಡವು ಚಾಂಪಿಯನ್ ಹಾಗೂ
ಕಾರ್ಗಿಲ್ ಎಫ್ ಸಿ ರನ್ನರ್ಸ್ ಸ್ಥಾನವನ್ನು ಪಡೆಯಿತು. ಪಂದ್ಯಕೂಟದ ಸಮಾರೂಪ ಸಮಾರಂಭದಲ್ಲಿ ತೆಕ್ಕಿಲ್ ಸೋಕರ್ಸ್ನ ಟಿ ಎಂ ಶಹೀದ್ ತೆಕ್ಕಿಲ್, ಫ್ರೆಂಡ್ಸ್ ಗೂನಡ್ಕದ ಸಾಜಿದ್ ಐ ಜಿ ಗೂನಡ್ಕ ಬಹುಮಾನ ವಿತರಿಸಿದರು. ಅನ್ವರ್ ಅರಂತೋಡು, ಖಾದರ್ ಮೊಟ್ಟೆಂಗಾರ್, ತಾಜುದ್ದೀನ್ ಮೊದಲಾದವರು ಉಪಸ್ಥಿತರಿದ್ದರು. ಪಂದ್ಯಕೂಟಕ್ಕೆ ಫ್ರೆಂಡ್ಸ್ ಗೂನಡ್ಕದ ಇಕ್ಬಾಲ್ ಮೊಟ್ಟೆಂಗಾರ್ ಮತ್ತು ಅಝೀಝ್ ಗೂನಡ್ಕ ಸಂಘಟಸಿದರು. ಸುನೈಲ್ ಹಾಗು ನಿಜಾರ್ ಪಂದ್ಯಾಟದ ನಿರ್ಣಾಯಕರಾಗಿದ್ದರು. ಟಿ.ಎಂ ಇಜಾಸ್ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಅಬ್ದುಲ್ ಖಾದರ್ ಮೊಟ್ಟೆಗಾರ್ ವಂದಿಸಿದರು.