ಸುಳ್ಯ: ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮತ್ತು ಗೂನಡ್ಕ ತೆಕ್ಕಿಲ್ ಶಿಕ್ಷಣ ಸಂಸ್ಥೆಯ ವತಿಯಿಂದ ಉದ್ಯಮಿ ಹಾಗು ಸಮಾಜ ಸೇವಕ ಅಶ್ರಫ್ ನಾಯ್ಮಾರ್ ಮೂಲ ಅವರನ್ನು ಸನ್ಮಾನಿಸಲಾಯಿತು. ತೆಕ್ಕಿಲ್ ಸಂಸ್ಥೆಗೆ ಭೇಟಿ ನೀಡಿದ ಅವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ತೆಕ್ಕಿಲ್ ಮಾದರಿ ಶಾಲೆಯ ಗೂನಡ್ಕ ಇದರ 18 ವಾರ್ಷಿಕೋತ್ಸವ ಸಮಾರಂಭದಲ್ಲಿ
ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಸನ್ಮಾನಿಸಿದರು.
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹನೀಫ್ ಎಸ್.ಕೆ.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ಸವಾದ್ ಸುಳ್ಯ, ಹಾಜಿ ಪಿ.ಪಿ ಉಮ್ಮರ್ ಗೂನಡ್ಕ, ಉನೈಸ್ ಪೆರಾಜೆ, ತಾಜ್ ಮೊಹಮ್ಮದ್ ಸಂಪಾಜೆ, ಶಾಲಾ ಮುಖ್ಯೋಪಾಧ್ಯಾಯ ಸಂಪತ್, ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಿಧ್ಯಾರ್ಥಿ ನಾಯಕ ಉವೈಸ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.





