ಗೂನಡ್ಕ:ಗೂನಡ್ಕದ ಬಡ ಮಹಿಳೆಗೆ ಟಿ.ಎಂ.ಶಹೀದ್ ತೆಕ್ಕಿಲ್ ಅವರ ನೇತೃತ್ವದ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸುಮಾರು 6 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ‘ಬೈತುಲ್ ಆಯಿಷ’ ಮನೆಯ ಹಸ್ತಾಂತರ ಫೆ.17 ರಂದು ನಡೆಯಲಿದೆ. ಕೇರಳದ ಸಚಿವ ಅಹಮದ್ ದೇವರಕೊವಿಲ್ ಕೀ ಹಸ್ತಾಂತರ ಮಾಡಲಿದ್ದಾರೆ.ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಲಿದ್ದಾರೆ. 37 ವರ್ಷ ಸರಕಾರಿ

ಶಾಲೆಯಲ್ಲಿ, 10 ವರ್ಷಗಳ ಕಾಲ ತೆಕ್ಕಿಲ್ ಶಿಕ್ಷಣ ಸಂಸ್ಥೆಯಲ್ಲಿ ಒಟ್ಟು 47 ವರ್ಷಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ದುಡಿದಿರುವ ದಾಮೋದರ ಮಾಸ್ತರ್ ಅವರಿಗೆ 2020-2001 ನೇ ಸಾಲಿನ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ನೀಡಿ ಗೌರವಿಸಲಾಗುವುದು.ಈ ಹಿಂದೆ ಕೇರಳ ಸಚಿವ ಕೆ.ಪಿ.ಮೋಹನ್, ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರಾದ ಶಾಫಿ ಮೆಹತರ್, ಜೋಡುಪಾಲದ ಪ್ರಳಯ ದುರಂತದಲ್ಲಿ ವಿಶೇಷ ಸೇವೆ ಗೈದ ಎಸ್.ಕೆ.ಎಸ್.ಎಸ್.ಎಫ್ ವಿಕಾಯ 18 ಸದಸ್ಯರ ತಂಡಕ್ಕೆ, ಪತ್ರಕರ್ತ ರವೀಂದ್ರನ್ ರಾವಣೀಶ್ವರಂ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು.

ಎರಡು ದಶಕಗಳ ಸಮಾಜ ಸೇವೆ:
ಟಿ.ಎಂ.ಶಹೀದ್ ನೇತೃತ್ವದಲ್ಲಿ 2001 ರಲ್ಲಿ ಪ್ರಾರಂಭಗೊಂಡ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನವು ಕಳೆದ 2 ದಶಕಗಳಿಂದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಹತ್ತು-ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಸಂಸ್ಥೆಯ ಅದೀನದಲ್ಲಿ ತೆಕ್ಕಿಲ್ ಮಾದರಿ ಸಮೂಹ ಶಿಕ್ಷಣ ಸಂಸ್ಥೆಯು ಎಲ್.ಕೆ.ಜಿ ಯಿಂದ 10ನೇ ತರಗತಿಯವರೆಗೆ ಶಿಕ್ಷಣವನ್ನು ನೀಡುತ್ತಿದೆ.ಇಲ್ಲಿ ಬಡ ಮತ್ತು ಅನಾಥ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣವನ್ನು ನೀಡಲಾತಿದೆ. ತೆಕ್ಕಿಲ್ ಸಮುದಾಯ ಭವನವು ಅರಂತೋಡಿನಲ್ಲಿ

ಕಾರ್ಯಚರಿಸುತ್ತಿದೆ.ರಂಜಾನ್ ತಿಂಗಳಲ್ಲಿ ಸೌಹಾರ್ದ ಇಫ್ತಾರ್ ಕೂಟ, ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರನ್ನು ಗುರುತಿಸಿ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್, ನಾಯಕತ್ವ ತರಬೇತಿ ಶಿಬಿರ, ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ಸಾರ್ವಜನಿಕರಿಗೆ ಸರಕಾರಿ ಮತ್ತು ಇನ್ನಿತರ ಸೌಲಭ್ಯಗಳ ಮಾಹಿತಿ ಕಾರ್ಯಗಾರ ಮತ್ತು ಸರ್ವಧರ್ಮ ಸಾಮರಸ್ಯದ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರುತ್ತಿದೆ.ಸಂಸ್ಥೆಯ ವತಿಯಿಂದ ಬಡ ಮತ್ತು ಅನಾಥ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯ, ವಿಧ್ಯಾರ್ಥಿವೇತನ, ಮನೆ ನಿರ್ಮಾಣ ಮತ್ತು ದುರಸ್ತಿಗೆ ಸಹಾಯಧನ, ವೈದ್ಯಕೀಯ ನೆರವು ಸೇರಿದಂತೆ ಹಲವಾರು ಸಮಾಜ ಮುಖಿ ಸೇವೆಯನ್ನು ಸಲ್ಲಿಸಲಾಗುತ್ತದೆ. ಟಿ.ಎಂ.ಶಹೀದ್ ತೆಕ್ಕಿಲ್ ತೆಕ್ಕಿಲ್ ಪ್ರತಿಷ್ಠಾನದ ರುವಾರಿ. ಇವರು ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪದಾಧಿಕಾರಿಯಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದಾರೆ. ರಾಜಕೀಯದೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮೂಲಕ ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವ್ವಿಯಾಗಿದ್ದಾರೆ.ಮುತ್ತಜ್ಜ ಅರಂತೋಡು ಪಠೇಲ್ ಅಹಮ್ಮದ್ ಕುಂಞಿ ಹಾಜಿ, ಅಜ್ಜ ತೆಕ್ಕಿಲ್ ಮಹಮ್ಮದ್ ಹಾಜಿ, ತಂದೆ ಬಾಬ ಹಾಜಿ ಹಾಗೂ ಟಿ.ಎಂ ಶಹೀದ್ ತೆಕ್ಕಿಲ್ ರವರು 4 ತಲೆಮಾರಿನಿಂದ ಸುಮಾರು 120 ವರ್ಷಗಳಿಂದ ತೆಕ್ಕಿಲ್ ಕುಟುಂಬದ ಪ್ರಮುಖರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಅಶ್ರಫ್ ಗುಂಡಿ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಮತ್ತು ಟಿ.ಎಂ.ಜಾವೇದ್ ತೆಕ್ಕಿಲ್ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ