ಪುತ್ತೂರು: ವೆಬ್ ಡೆವಲಪ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಯೂಐ/ಯುಎಕ್ಸ್ ಡಿಸೈನ್ ಮತ್ತು ಗ್ರಾಫಿಕ್ ಡಿಸೈನ್ ನಲ್ಲಿ ಐದು ವರ್ಷಕ್ಕೂ ಹೆಚ್ಚಿನ ಅನುಭವವನ್ನು ಹೊಂದಿರುವ ಪ್ರಮುಖ ಸಾಫ್ಟ್ವೇರ್ ಅಭಿವೃದ್ಧಿ ಕಂಪನಿ ಪುತ್ತೂರಿನ ದಿ ವೆಬ್ ಪೀಪಲ್, ತಮ್ಮ ಹೊಸ ಡಿಜಿಟಲ್ ಮಾರ್ಕೆಟಿಂಗ್ ವಿಭಾಗ “ಸ್ಕೇಲ್ (Scaaale)”ಗೆ ನವೆಂಬರ್ 30 ರಂದು ಆರಂಭವಾಗಲಿದೆ. ಈ ಹೊಸ ಯೋಜನೆ ದಿ ವೆಬ್ ಪೀಪಲ್ ಅವರ ಸೇವಾ ವೈವಿಧ್ಯತೆಯಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆ ಆಗಿದ್ದು, ಅದು ವಿಶೇಷ

ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನು ನೀಡುತ್ತದೆ. ಸ್ಕೇಲ್ ಆರಂಭದ ಸಮಾರಂಭವು ಜಿ ಎಲ್ ಟ್ರೇಡ್ ಸೆಂಟರ್ನ ಮೂರನೇ ಮಹಡಿಯಲ್ಲಿ ನ.30ರಂದು ಪೂ. 9:30 ಕ್ಕೆ ನಡೆಯಲಿದೆ. ಅತಿಥಿಗಳಾಗಿ ಪುತ್ತೂರು ಶಾಸಕರಾದ ಅಶೋಕ ಕುಮಾರ್ ರೈ,ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಮುಳಿಯ ಸಮೂಹ ಸಂಸ್ಥೆಗಳ ಚೇರ್ಮೆನ್ ಕೇಶವ ಪ್ರಸಾದ್ ಮುಳಿಯ, ಜಿಎಲ್ ಸಮೂಹ ಸಂಸ್ಥೆಗಳ ಚೇರ್ಮೆನ್ ಬಲರಾಮ ಆಚಾರ್ಯ, ಜಪಾನೀಸ್ ಪಬ್ಲಿಕ್ ಉದ್ಯಮ
ಇನೋಟೆಕ್ ಇದರ ನಿರ್ವಹಣಾ ಅಧಿಕಾರಿ ಪೃಥ್ವಿ ಭಟ್,ಮಾಜಿ ಸೈನ್ಯಾಧಿಕಾರಿ, ಉದ್ಯಮಿ ಹಾಗೂ ರಾಜಕೀಯ ಮುಖಂಡರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಎಸ್ಡಿಪಿ ರೆಮೆಡೀಸ್ ಚೇರ್ಮೆನ್ ಡಾ. ಹರಿಕೃಷ್ಣ ಪಾಣಾಜೆ, ಯೂಆರ್ ಪ್ರಾಪರ್ಟೀಸ್ ಎಂಡಿ ಉಜ್ವಲ್ ಪ್ರಭು,ಲ ಅವರು ಭಾಗವಹಿಸಲಿದ್ದಾರೆ.
“ಸ್ಕೇಲ್ ಎಂಬುದು ನಮ್ಮ ಸಂಸ್ಥೆಯ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳಲ್ಲಿನ ವ್ಯಾಪಕತೆ ಮತ್ತು ಸೃಜನಾತ್ಮಕತೆಯ ಹೊಸ ಅಧ್ಯಾಯವಾಗಿದೆ. ಸ್ಕೇಲ್ ಮೂಲಕ ನಾವು ನಮ್ಮ ಗ್ರಾಹಕರಿಗೆ ಇನ್ನಷ್ಟು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನು ನೀಡಲು ಸಜ್ಜಾಗಿದ್ದೇವೆ.” ಎಂದು ದಿ ವೆಬ್ ಪೀಪಲ್ ಇದರ ಸಿಇಒ ಆದಿತ್ಯ ಕಲ್ಲೂರಾಯ ಹೇಳಿದ್ದಾರೆ.

“ಸ್ಕೇಲ್ ನ ಆರಂಭವು ನಮ್ಮ ಕ್ಲೈಂಟ್ಸ್ಗಳಿಗೆ ಇನ್ನಷ್ಟು ಉತ್ತಮ ಮತ್ತು ನವೀನ ಡಿಜಿಟಲ್ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡುವಲ್ಲಿ ಒಂದು ಪ್ರಮುಖ ಹೆಜ್ಜೆ. ನಾವು ಗ್ರಾಹಕರ ಅಗತ್ಯಗಳನ್ನು ಆಳವಾಗಿ ಅರ್ಥೈಸಿ, ಅವರ ವ್ಯಾಪಾರವನ್ನು ಹೊಸ ಮಟ್ಟಕ್ಕೆ ತಲುಪಿಸಲು ಸ್ಕೇಲ್ನ ಸೇವೆಗಳು ಸಹಾಯ ಮಾಡಲಿವೆ.” ದಿ ವೆಬ್ ಪೀಪಲ್ ಇದರ ಸಿಓಓ ಶರತ್ ಶ್ರೀನಿವಾಸ ತಿಳಿಸಿದ್ದಾರೆ.
ಸ್ಕೇಲ್ ವೆಬ್ ಡೆವಲಪ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಯೂಐ/ಯುಎಕ್ಸ್ ಡಿಜೈನ್ ಮತ್ತು ಗ್ರಾಫಿಕ್ ಡಿಜೈನ್ ನಂತಹ ದಿ ವೆಬ್ ಪೀಪಲ್ ಅವರ ಪ್ರಸ್ತುತ ಸೇವೆಗಳ ಜೊತೆಗೆ ಕಾರ್ಯ ನಿರ್ವಹಿಸಲಿದ್ದು, ಕಂಪನಿಯು ತನ್ನ ಗ್ರಾಹಕರಿಗೆ ತಮ್ಮ ಉದ್ಯಮದ ಡಿಜಿಟಲ್ ಅವಶ್ಯಕತೆಗಳನ್ನು ಇನ್ನಷ್ಟು ವ್ಯಾಪಕವಾಗಿ ಪೂರೈಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಅವರು ವಿವರಿಸಿದರು.
ದಿ ವೆಬ್ ಪೀಪಲ್:
ಪುತ್ತೂರಿನಲ್ಲಿ ಸ್ಥಾಪಿತವಾದ ದಿ ವೆಬ್ ಪೀಪಲ್, ವೆಬ್ ಡೆವಲಪ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಯೂಐ/ಯುಎಕ್ಸ್ ಡಿಸೈನ್, ಮತ್ತು ಗ್ರಾಫಿಕ್ ಡಿಜೈನ್ ನಲ್ಲಿ ಐದಕ್ಕೂ ಅಧಿಕ ವರ್ಷಗಳಿಂದ ಮುಂಚೂಣಿಯಲ್ಲಿದೆ. ಸ್ಕೇಲ್ ಆರಂಭದೊಂದಿಗೆ, ದಿ ವೆಬ್ ಪೀಪಲ್ ಡಿಜಿಟಲ್ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡುವಲ್ಲಿ ತಮ್ಮ ಬದ್ಧತೆಯನ್ನು ಮತ್ತೆ ದೃಢಪಡಿಸುತ್ತಿದೆ.












